ಚಂದಾ ವಸೂಲಿ ವೇಳೆ ಯುವಕನ ಮೇಲೆ ಉಪ ಮೇಯರ್ ದಾದಾಗಿರಿ

By Suvarna Web DeskFirst Published Sep 10, 2017, 9:20 AM IST
Highlights

ಹಲ್ಲೆಗೊಳಗಾದ ಯುವಕ ಯಲ್ಲಪ್ಪ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಕುರಿತು ದೂರು ದಾಖಲಿಸಿದ್ದಾರೆ.

ವಿಜಯಪುರ(ಸೆ.10): ನಾಡದೇವಿ ಹಬ್ಬಕ್ಕೆ ಚಂದಾ ವಸೂಲಿ ಮಾಡುವಾಗ ವಿಜಯಪುರ ಪಾಲಿಕೆ ಉಪ ಮೇಯರ್ ಮತ್ತು ಆತನ ಬೆಂಬಲಿಗರು ಮೊಬೈಲ್ ಅಂಗಡಿಯ ನೌಕರನ ಮೇಲೆ ಗೂಂಡಾಗಿರಿ ನಡೆಸಿರುವ ಆರೋಪ ಕೇಳಿ ಬಂದಿದೆ.

ಉಪ ಮೇಯರ್ ರಾಜೇಶ ದೇವಗಿರಿ ಮತ್ತು ಬೆಂಬಲಿಗರು ಮೊಬೈಲ್ ಅಂಗಡಿಯ ನೌಕರ ಯಲ್ಲಪ್ಪ ಹಂಚಿನಾಳ ಮೇಲೆ ದಾದಾಗಿರಿ ನಡೆಸಿದ್ದು, ಈ ಸಂಬಂಧ ಯಲ್ಲಪ್ಪ ಹಂಚಿನಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾಡದೇವಿ ಹಬ್ಬದ ಚಂದಾ ವಸೂಲಿ ವೇಳೆ ಮೊಬೈಲ್ ಅಂಗಡಿಯ ಸಿಬ್ಬಂದಿ ಯಲ್ಲಪ್ಪ ಹಂಚಿನಾಳ ಹಾಗೂ ಉಪ ಮೇಯರ್‌ ರಾಜೇಶ ದೇವಗಿರಿ ಮತ್ತು ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಯಲ್ಲಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಗೊಳಗಾದ ಯುವಕ ಯಲ್ಲಪ್ಪ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಕುರಿತು ದೂರು ದಾಖಲಿಸಿದ್ದಾರೆ.

click me!