
ಬೆಂಗಳೂರು(ಮಾ.03): ಶಾಸಕ ಹ್ಯಾರಿಸ್ ಪುತ್ರ ನಲಪಾಡ್'ನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಉದ್ಯಮಿ ಪುತ್ರ ವಿದ್ವತ್ ಚೇತರಿಸಿಕೊಳ್ಳುತ್ತಿದ್ದು, ಇಂದು ಸಿಸಿಬಿ ಅಧಿಕಾರಿಗಳಿಗೆ ಫರ್ಜಿ ಕೆಫೆಯಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾನೆ.
ಫೆಬ್ರವರಿ 17. ಸಂಜೆ 7.30ಕ್ಕೆ ನಾನು ನನ್ನ ಸ್ನೇಹಿತರಾದ ಕಿರಣ್, ಪ್ರವೀಣ್, ವಿಶಾಲ್ ಮತ್ತು ಸೂರ್ಯ ಸೇರಿದಂತೆ ಐದು ಜನರು ಫರ್ಜಿ ಕೆಫೆಗೆ ಊಟಕ್ಕೆಂದು ತೆರಳಿದ್ದೆವು. ನಾವೆಲ್ಲರೂ ಸೇರಿ ಜೊತೆಗೆ ಊಟ ಮಾಡುತ್ತಿದ್ದೆವು. ರಾತ್ರಿ 10.30ರ ಸುಮಾರಿಗೆ ನಾನು ಹೋಟೆಲ್'ನಿಂದ ಹೊರ ಹೋಗುವಾಗ ಮೊಹಮ್ಮದ್ ನಲಪಾಡ್ ಸೇರಿದಂತೆ 8 ರಿಂದ 10 ಜನರು ಫರ್ಜಿ ಕೆಫೆಗೆ ಬಂದರು.
ನಲಪಾಡ್ ಬರುವಾಗ ಆತನ ಕಾಲು ಟಚ್ ಆಗುತ್ತೆ, ನನ್ನ ಕಾಲು ಫ್ರ್ಯಾಕ್ಚರ್ ಆಗಿದ್ದರಿಂದ ನಾನು ‘ಏ ಬ್ರದರ್ ನೋಡ್ಕೊಂಡು ಓಡಾಡಿ’ ಎಂದು ಹೇಳಿದೆ. ಆಗ ನಲಪಾಡ್ ‘ಏಯ್ ನಾನು ಯಾರು ಅಂತಾ ಗೊತ್ತಾ. ನಾನು ಲೋಕಲ್ ಎಂಎಲ್'ಎ ಮಗ ಎಂದು ಅವಾಜ್ ಹಾಕಿದ. ಬಳಿಕ ನಿನಗೆ ಗತಿ ಕಾಣಿಸುತ್ತೀನಿ’ ಎಂದು ಹೇಳಿ ನನ್ನ ಕಪ್ಪಾಳಕ್ಕೆ ಹೊಡೆದ. ಅಷ್ಟೊತ್ತಿಗೆ ಅವನ ಜೊತೆಯಲ್ಲಿದ್ದ ಹುಡುಗರು ಅವಾಚ್ಯ ಶಬ್ದದಿಂದ ನಿಂದಿಸಿ ನನಗೆ ಮನಬಂದಂತೆ ನನಗೆ ಹೊಡೆದರು. ನಾನು ಕೆಳಗೆ ಬಿದ್ದಾಗ ನಲಪಾಡ್ ಸ್ನೇಹಿತರು ನನ್ನ ಕುತ್ತಿಗೆ ಹಿಡಿದರು. ಆಗ ನಲಪಾಡ್ ‘ ಕಿಸ್ ಮೈ ಫುಟ್ ಹಾಗೂ ಸಾರಿ ಕೇಳು ಎಂದರು. ಆ ಮೇಲೆ ನಾನು ಏಕೆ ಸಾರಿ ಕೇಳಬೇಕು ಎಂದು ಕೇಳಿದೆ. ನಂತರ ನಲಪಾಡ್ ‘ ಐ ವಿಲ್ ಕಿಲ್ ಯೂ’ ಅಂತಾ ಹೇಳಿ ಹೊಡೆದ.
ನಲಪಾಡ್ ಮತ್ತು ಸ್ನೇಹಿತರು ನನಗೆ ಗಾಜಿನ ಮಗ್, ಐಸ್ ಮಗ್ ಮತ್ತು ಬಿಯರ್ ಬಾಟಲ್'ನಿಂದ ಹೊಡೆದರು. ಅವರು ಮನಬಂದಂತೆ ಹೊಡೆಯುತ್ತಿರುವಾಗ ಬೌನ್ಸರ್ ಕರೆದುಕೊಂಡು ಹೋದರು. ನನ್ನ ಸ್ನೇಹಿತರ ಜೊತೆ ನಾನು ಫಸ್ಟ್'ಪ್ಲೋರ್ ಎಕ್ಸಲೇಟರ್ ಬಳಿ ಹೋಗುತ್ತಿರುವಾಗ ನಲಪಾಡ್ ಸಹಚರರು ನನ್ನನ್ನು ಮೇಲೆ ಮತ್ತೆ ಹಲ್ಲೆ ನಡೆಸಿ ಕರೆದುಕೊಂಡು ಹೋಗ್ತಾರೆ. ತೀವ್ರವಾಗಿ ಗಾಯಗೊಂಡಿದ್ದ ನನ್ನನ್ನು ಪ್ರವೀಣ್ ಮತ್ತು ಕಿರಣ್ ಕಾರಿನಲ್ಲಿ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ಪ್ರವೀಣ್, ರಾಜ್'ಕುಮಾರ್ ಮೊಮ್ಮಗ ಗುರು ರಾಜ್'ಕುಮಾರ್'ಗೆ ಕರೆ ಮಾಡಿ, ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿ ಆಸ್ಪತ್ರೆಗೆ ಕರೆಸಿದರು. ಜೊತೆಗೆ ನನ್ನ ಅಣ್ಣ ಸಾತ್ವಿಕ್'ಗೂ ಕೂಡ ಕರೆ ಮಾಡಿದ. ನಾನು ಅಡ್ಮಿಟ್ ಆದ ನಾಲ್ಕೈದು ನಿಮಿಷದಲ್ಲಿಯೇ ಎರ್ಮಜೆನ್ಸಿ ವಾರ್ಡ್‌ಗೆ' ನಲಪಾಡ್ ಗ್ಯಾಂಗ್ ಬಂತು. ‘ನೀನೇನಾದ್ರೂ ಅಡ್ಮಿಟ್ ಆದ್ರೆ. ನಿನಗೊಂದು ಗತಿ ಕಾಣಿಸ್ತೀನಿ’ ಅಂತಾ ನಲಪಾಡ್ ಬೆದರಿಕೆ ಹಾಕಿದ. ಅಷ್ಟೊತ್ತಿಗೆ ನನ್ನ ಅಣ್ಣ ಸಾತ್ವಿಕ್ ಬಂದ, ಅವನ ಜೊತೆಯೂ ಅವರು ಜಗಳ ಮಾಡಿದರು. ಆಗ ನನ್ನ ಅಣ್ಣ ‘ಇದು ಆಸ್ಪತ್ರೆ.. ಇಲ್ಲಿಂದ ಹೋಗಿ’ ಎಂದ.
ನನ್ನ ಅಣ್ಣ ಸಾತ್ವಿಕ್ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ನಿನ್ನನ್ನೂ ಸಾಯಿಸ್ತೀವಿ ಎಂದು ಆತನ ಮೇಲೂ ಅಟ್ಯಾಕ್ ಮಾಡಿದರು. ಆ ಸಮಯದಲ್ಲಿ ಗುರು ರಾಜ್'ಕುಮಾರ್ ಆಸ್ಪತ್ರೆಗೆ ಬಂದ. ನಲಪಾಡ್'ಗೆ ಗುರು ರಾಜ್‌ಕುಮಾರ್ ‘ನಾನು ರಾಜ್‌ಕುಮಾರ್ ಮೊಮ್ಮಗ. ಇದೆಲ್ಲಾ ಸರಿ ಇರುವುದಿಲ್ಲ’ ಎಂದ. ಆಗ ನಲಪಾಡ್ ‘ ಬ್ರದರ್ ಐ ನೋ ಪುನೀತ್ ರಾಜ್'ಕುಮಾರ್. ಮೈ ವೇರಿ ಕ್ಲೋಸ್ ಫ್ರೆಂಡ್’ ಅಂತಾ ಹೇಳಿ ಹೊರ ಹೋದ ಎಂದು ವಿದ್ವತ್ ಪೊಲೀಸರೆದುರು ಹೇಳಿಕೆ ಕೊಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.