
ಬೆಂಗಳೂರು: ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರಣ್ ಪುರದ ನೀಲವಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.
ಆದರೆ ಪೊಲೀಸರ ಜತೆಗಿದ್ದ ಇನ್ನೋರ್ವ ಸಹಾಯಕ-ಕ್ಯಾಮೆರಾಮ್ಯಾನ್ ಮೊರ್ಮುಕುತ್ ಶರ್ಮಾ ಎಂಬವರು ಅದೃಷ್ವವಶಾತ್ ಪಾರಾಗಿದ್ದಾರೆ. ನಕ್ಸಲರು ಸುತ್ತುವರಿದ ಸಂದರ್ಭದಲ್ಲಿ ಆತ ತನ್ನ ತಾಯಿಗಾಗಿ ಸೆಲ್ಫಿ- ವಿಡಿಯೋ ರೆಕಾರ್ಡ್ ಮಾಡಿರುವುದು ಇದೀಗ ವೈರಲ್ ಆಗಿದೆ.
ನಮ್ಮನ್ನು ನಕ್ಸಲರು ಸುತ್ತುವರೆದಿದ್ದಾರೆ. ಪರಿಸ್ಥಿತಿ ಬಹಳ ಸಂಕೀರ್ಣವಾಗಿದೆ. ಅಮ್ಮ ನಾನಿನ್ನನ್ನು ಬಹಳ ಪ್ರೀತಿಸುತ್ತೇನೆ. ಏನಾಗುತ್ತೋ ಗೊತ್ತಿಲ್ಲ. ಬದುಕಿರುತ್ತೇನೋ, ಸಾಯುತ್ತೇನೋ ಗೊತ್ತಿಲ್ಲ...ಮೃತ್ಯುವನ್ನು ಕಣ್ಣೆದುರಿಗೆ ಕಾಣುತ್ತಿದ್ದೇನೆ. ಆದರೂ ಅಂಜಿಕೆಯಾಗುತ್ತಿಲ್ಲ.. ಬದುಕುಳಿಯುದು ಕಷ್ಟ.. ಎಂದು ಶರ್ಮಾ ಆ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ನಕ್ಸಲ್ ದಾಳಿಗೆ ದೂರದರ್ಶನ್ ಕ್ಯಾಮರಾಮ್ಯಾನ್ ಸಾವು!
ಅರುಣ್‌ಪುರದಲ್ಲಿ ನಕ್ಸಲರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೆಹಲಿಯಿಂದ ಚುನಾವಣಾ ವರದಿ ಮಾಡಲು ದೆಹಲಿಯಿಂದ ಬಂದಿದ್ದ ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದ್ ಮೃತಪಟ್ಟಿದ್ದರು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.