
ಮುಂಬೈ : ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಈ ಬಾರಿ ಸಾಲು ಸಾಲು ಮದುವೆ ಏರ್ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ವಿವಾಹದ ಸುದ್ದಿಯಾದಾಗಿ ನಿಂದಲೂ ಒಂದಲ್ಲಾ ಒಂದು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮತ್ತೆ ಅಂಥದ್ದೇ ಒಂದು ಸುದ್ದಿ ವೈರಲ್ ಆಗಿದೆ. ಮುಕೇಶ್ ಅಂಬಾನಿ ತಮ್ಮ ಭಾವಿ ಸೊಸೆ ಶ್ಲೋಕಾ ಮೆಹ್ತಾ ಅವರಿಗೆ ಚಿನ್ನದ ಲೇಪನವಿರುವ ಕಾರನ್ನು ಸದ್ಯದಲ್ಲೇ ಉಡುಗೊರೆಯಾಗಿ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಹೀಗೆ ವೈರಲ್ ಆದ ವಿಡಿಯೋದಲ್ಲಿ ಚಿನ್ನದ ಬಣ್ಣದ ಕಾರಿದ್ದು, ಮುಕೇಶ್ ಅಂಬಾನಿ ತಮ್ಮ ಭಾವಿ ಸೊಸೆಗೆ ಈ ಕಾರನ್ನು ಉಡು ಗೊರೆಯಾಗಿ ನೀಡಲಿದ್ದು, ಇದರ ಬೆಲೆ 6.7 ಕೋಟಿ ರು. ಈ ಕಾರನ್ನು ದುಬೈನಲ್ಲಿ ತಯಾರಿ ಸಲಾಗುತ್ತಿದ್ದು, ಜೂ.20ರಂದು ಭಾರತಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಇದು ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್ ಆಗಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ಸಿನಿರೈಸರ್, ಯುಸಿ ನ್ಯೂಸ್ ದಂತಹ ಕೆಲವು ವೆಬ್‌ಸೈಟ್ ಗಳೂ ಕೂಡ ಇದನ್ನು ವರದಿ ಮಾಡಿದ್ದವು. ಆದರೆ ನಿಜಕ್ಕೂ ಮುಕೇಶ್ ಅಂಬಾನಿ ತಮ್ಮ ಭಾವಿ ಸೊಸೆಗೆ ಚಿನ್ನ ಲೇಪಿತ ಕಾರನ್ನು ನೀಡುತ್ತಿರುವುದು ಸತ್ಯವೇ ಎಂದು ಬೂಮ್ ಲೈವ್ ಪರಿಶೀಲನೆ ನಡೆಸಿದ್ದು, ಇದೊಂದು ಸುಳ್ಳು ಸುದ್ದಿ
ಎಂಬುದು ಸಾಬೀತಾಗಿದೆ. ರಿಲಯನ್ಸ್ ಸಂಸ್ಥೆಯ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕಾಶ್-ಶ್ಲೋಕಾ ಮೆಹ್ತಾ ವಿವಾಹ ಆಹ್ವಾನ ಪತ್ರಿಕೆ ಎಂದು ಹರಿದಾಡುತ್ತಿರುವ ವಿಡಿಯೋ ನಿಜ.
ಅದರ ಬೆಲೆ 1.5 ಲಕ್ಷ ರು. ಆದರೆ ಚಿನ್ನ ಲೇಪಿತ ಕಾರನ್ನು ಉಡುಗೊರೆಯಾಗಿ ನೀಡುತ್ತಿರುವುದು ಸುಳ್ಳು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿನ್ನಲೇಪಿತ ಕಾರು ವಾಸ್ತವವಾಗಿ ನಿಸ್ಸಾನ್ R35GT-R C ಇದನ್ನು ಜಪಾನಿನಲ್ಲಿ ತಯಾರಿಸಲಾಗತ್ತದೆ.
ಮಲಗಿಕೊಂಡು ಸಿನಿಮಾ ನೋಡುವ ಥಿಯೇಟರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.