
ಮಂಗಳೂರು: ನಗರದ ಕಸಬಾ ಬಜಾರ್‌ನಲ್ಲಿ ಬ್ರಾಹ್ಮಣರ ಹೆಣ್ಮಕ್ಕಳ ಶಾಲಾ ಕಟ್ಟಡದಲ್ಲಿ ಐಷಾರಾಮಿ ರೆಸ್ಟೋರೆಂಟ್‌ಗೆ ನೀಡಿದ ನೀಡಿದ ಪರವಾನಿಗೆಯನ್ನು ಮಹಾನಗರ ಪಾಲಿಕೆ ಕೊನೆಗೂ ರದ್ದುಪಡಿಸಿದೆ.
1857ರಲ್ಲಿ ಆರಂಭವಾಗಿ 2008ರವರೆಗೆ ಕಾರ್ಯಾಚರಿಸಿದ ಈ ಶಾಲೆಯನ್ನು ಅನಿವಾರ್ಯವಾಗಿ ಮುಚ್ಚವಾಗಿತ್ತು. ಬಳಿಕ ಈ ಶಾಲೆಯ ಆಸ್ತಿಯನ್ನು ಸರ್ಕಾರಕ್ಕೆ ಒಪ್ಪಿಸುವ ಬದಲು ಆಡಳಿತ ಮಂಡಳಿ ಐಷಾರಾಮಿ ರೆಸ್ಟೋರೆಂಟ್‌ಗೆ ನೀಡಿತ್ತು.
ಇದರ ವಿರುದ್ಧ ಆರ್’ಟಿಐ ಕಾರ್ಯಕರ್ತ, ಮಾನವಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ಪಾಲಿಕೆಗೆ ಹಾಗೂ ಸರ್ಕಾರಕ್ಕೆ ದೂರು ನೀಡಿದ್ದರು. ರೆಸ್ಟೋರೆಂಟ್ ಪರವಾನಿಗೆಯನ್ನು ರದ್ದುಪಡಿಸುವಂತೆ ಕೋರಿ ಕಳೆದ ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದರು.
ಆದರೆ ಫಲಕಾರಿಯಾಗಿರಲಿಲ್ಲ. ಇದೀಗ ಕೊನೆಯ ಪ್ರಯತ್ನವಾಗಿ ಗುರುವಾರ ಪಾಲಿಕೆಯ ಗಾಂಧಿ ಪ್ರತಿಮೆಯ ಎದುರು ಮತ್ತೆ ಸತ್ಯಾಗ್ರಹವನ್ನು ಆರಂಭಿಸಿದ್ದರು. ಈ ಹೋರಾಟಕ್ಕೆ ಮಣಿದ ಮಹಾನಗರ ಪಾಲಿಕೆ ತಕ್ಷಣದಿಂದ ಜಾರಿಗೆ ಬರುವಂತೆ ರೆಸ್ಟೋರೆಂಟ್‌ಗೆ ನೀಡಿದ ಪರವಾನಿಗೆಯನ್ನು ರದ್ದುಪಡಿಸಿದ ಆದೇಶ ಪತ್ರವನ್ನು ನೀಡಿತು. ರೆಸ್ಟೋರೆಂಟ್ ಬಂದ್ ಮಾಡದಿದ್ದರೆ ಪಾಲಿಕೆಯಿಂದಲೇ ಮುಚ್ಚುವ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಆದೇಶದಲ್ಲಿ ನೀಡಲಾಗಿದೆ.
ಶಾಲಾ ಕಟ್ಟಡವನ್ನು ಬೇರೆಯವರು ಪರಭಾರೆ ಮಾಡುವುದನ್ನು ತಡೆಯುವಲ್ಲಿ ಸಫಲನಾಗಿದ್ದೇನೆ. ಇನ್ನು ಬಡವರ ಮಕ್ಕಳಿಗೆ ನೆರವಾಗುವಂತೆ ಆಂಗ್ಲ ಮಾಧ್ಯಮದಲ್ಲಿ ತರಗತಿಯನ್ನು ನಡೆಸುವಂತೆ ಶಿಕ್ಷಣ ಇಲಾಖೆಯನ್ನು ಕೋರಲಾಗುವುದು ಎಂದು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ತಿಳಿಸಿದ್ದಾರೆ.
ಈ ಶಾಲೆಯ ಕುರಿತು ‘ಐತಿಹಾಸಿಕ ಬ್ರಾಹ್ಮಣರ ಶಾಲೆ ಇನ್ನು ಐಷಾರಾಮಿ ರೆಸ್ಟೋರೆಂಟ್’ ಶೀರ್ಷಿಕೆಯಲ್ಲಿ ‘ಕನ್ನಡಪ್ರಭ’ ಮೊದಲ ಬಾರಿಗೆ ವಿಷೇಶ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.