ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಮಠಕ್ಕೆ ಮರಳಿದ ಶ್ರೀಗಳು

Published : Sep 22, 2017, 06:59 PM ISTUpdated : Apr 11, 2018, 12:47 PM IST
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಮಠಕ್ಕೆ ಮರಳಿದ ಶ್ರೀಗಳು

ಸಾರಾಂಶ

ಶತಾಯುಷಿ,ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅನಾರೊಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಮರಳಿದರು. ನಾಲ್ಕೈದು ದಿನಗಳ ವಿಶ್ರಾಂತಿಯ ಅಗತ್ಯವಿದ್ದು ಬಿಜಿಎಸ್ ವೈದ್ಯರು ಮಠದಲ್ಲಿಯೇ  ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಿದ್ದಾರೆ.

ಬೆಂಗಳೂರು (ಸೆ.22): ಶತಾಯುಷಿ,ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅನಾರೊಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಮರಳಿದರು. ನಾಲ್ಕೈದು ದಿನಗಳ ವಿಶ್ರಾಂತಿಯ ಅಗತ್ಯವಿದ್ದು ಬಿಜಿಎಸ್ ವೈದ್ಯರು ಮಠದಲ್ಲಿಯೇ  ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಿದ್ದಾರೆ.

ಶತಾಯುಷಿ,ನಡೆದಾಡುವ ದೇವರೆಂದೇ ಕರೆಸಿಕೊಳ್ಳುವ ಸಿದ್ದಗಂಗಾ ಶ್ರೀಗಳು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಿವರ್, ಪ್ಯಾಂಕ್ರಿಯಸ್ , ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಶ್ರೀಗಳು ನಿನ್ನೆ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.  ಮೂರನೇ ಬಾರಿ ಪಿತ್ತನಾಳದಲ್ಲಿ  ಯಶಸ್ವಿ ಸ್ಟಂಟ್ ಅಳವಡಿಕೆ ನಂತರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಸಿದ್ದಗಂಗಾ ಸ್ವಾಮೀಜಿ ಬೆಳಿಗ್ಗೆ ಮಠಕ್ಕೆ ಕಳುಹಿಸಿಕೊಡಲಾಯಿತು.  ನಾಲ್ಕೈದು ದಿನಗಳ ಕಾಲ  ಶ್ರೀಗಳ ಆರೋಗ್ಯವನ್ನು  ಸೂಕ್ಷ್ಮವಾಗಿ observe ಮಾಡುವ ಅಗತ್ಯವಿದ್ದು ಡಾ ರವೀಂದ್ರ ನೇತೃತ್ವದ ತಂಡ ಮಠಕ್ಕೆ ತೆರಳಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ.

ಪಿತ್ತನಾಳದಲ್ಲಿ ಕಲ್ಲು ಕಾಣಿಸಿಕೊಂಡು ರಕ್ತ ಸಂಚಲನದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರ ಜತೆಗೆ ಜಾಂಡೀಸ್, ಕಿಡ್ನಿ ಸಮಸ್ಯೆಯನ್ನ ಶ್ರೀಗಳು ಎದುರಿಸುತ್ತಿದ್ದಾರೆ. ಈ ಬಾರಿಯ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ಸು ಕಂಡಿದ್ದು ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಯಲ್ಲಿ ಜಾಂಡೀಸ್ ಸಂಪೂರ್ಣ ಗುಣಮುಖವಾಗಿದ್ದು ಶ್ರೀಗಳಗೆ ಇದು ಗೋಲ್ಡನ್ ಅವರ್ ಚಿಕಿತ್ಸೆ ಎಂದು ಸಿದ್ದಗಂಗಾಮಠದ ಕಿರಿಯ ಸ್ವಾಮೀಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?