ಜೈಪಾಲ್‌ ರೆಡ್ಡಿ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು!

Published : Jul 30, 2019, 08:27 AM IST
ಜೈಪಾಲ್‌ ರೆಡ್ಡಿ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು!

ಸಾರಾಂಶ

ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು| ಜೈಪಾಲ್‌ ರೆಡ್ಡಿ ಒಡನಾಟ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು| 

ನವದೆಹಲಿ[ಜು.30]: ಭಾನುವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಎಸ್‌.ಜೈಪಾಲ್‌ ರೆಡ್ಡಿ ಅವರನ್ನು ನೆನೆದು, ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ಕಣ್ಣೀರಿಟ್ಟಘಟನೆ ನಡೆದಿದೆ.

ಸೋಮವಾರ ಕಲಾಪ ಆರಂಭಾಗುತ್ತಲೇ ವೆಂಕಯ್ಯನಾಯ್ಡು ಅವರು ಜೈಪಾಲ್‌ ರೆಡ್ಡಿ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ಪ್ರಸ್ತಾಪ ಮಾಡಿದರು. ಈ ವೇಳೆ ತಮ್ಮ ಆತ್ಮೀಯರಾಗಿದ್ದ ಜೈಪಾಲ್‌ರೆಡ್ಡಿ ಅವರನ್ನು ನೆನೆಪಿಸಿಕೊಂಡು ನಾಯ್ಡು ಆಸನದಲ್ಲೇ ಕಣ್ಣೀರಿಟ್ಟರು.

ಹಿಂದೆಲ್ಲಾ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಮುಂಜಾನೆ 8 ಗಂಟೆಗೆಲ್ಲಾ ಆರಂಭವಾಗುತ್ತಿತ್ತು. ಹೀಗಾಗಿ ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು ಎಂದು ಹಳೆಯ ನೆನಪು ಮೆಲಕು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು