ಕರೆನ್ಸಿ ರದ್ದತಿ ಭಾರತದ ನಂತರ ಈಗ ಈ ದೇಶದ ಸರದಿ : ಮೋದಿ ಪ್ರೇರಣೆಯಾದರೆ!

By Suvarna Web DeskFirst Published Dec 12, 2016, 6:47 PM IST
Highlights

‘‘ನನ್ನಸಾಂವಿಧಾನಿಕಅಧಿಕಾರದಆಧಾರದಲ್ಲಿ, ಆರ್ಥಿಕತುರ್ತುಪರಿಸ್ಥಿತಿಆದೇಶದಮೂಲಕ, ನಾನು 100 ಬೊಲಿವರ್ಬಿಲ್ಅನ್ನುಮುಂದಿನ 72 ಗಂಟೆಗಳಲ್ಲಿಚಲಾವಣೆಯಿಂದಹಿಂಪಡೆಯಲುನಿರ್ಧರಿಸಿದ್ದೇನೆ’’

ಕ್ಯಾರಕಸ್(ಡಿ.13): ಭಾರತದಲ್ಲಿ ನೋಟು ಅಮಾನ್ಯಗೊಳಿಸಿದ ಬಳಿಕ, ಇದೀಗ ದಕ್ಷಿಣ ಅಮೆರಿಕದ ವೆನಿಜುವೆಲಾ ಕೂಡ ಇದೇ ದಾರಿಯಲ್ಲಿ ಸಾಗಿದೆ. ವೆನಿಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಅವರು ದೇಶದ ಅತಿದೊಡ್ಡ ಮುಖ ಬೆಲೆಯ ಕರೆನ್ಸಿ 100 ಬೊಲಿವರ್ ಬಿಲ್ ಅನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ, ತುರ್ತು ಆಜ್ಞೆ ಹೊರಡಿಸಿದ್ದಾರೆ.

ನೆರೆರಾಷ್ಟ್ರ ಕಾಂಬೋಡಿಯಾದ ಮಾಫಿಯಾಗಳಲ್ಲಿ ಸಂಗ್ರಹವಾಗಿರುವ ಈ ನೋಟುಗಳ ಚಲಾವಣೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಜಗತ್ತಿನಲ್ಲೇ ಅತ್ಯಕ ಹಣದುಬ್ಬರ ಹಾಗೂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೇಶವಾಗಿರುವ ವೆನಿಜುವೆಲಾದಲ್ಲಿ, ಹೊಸ ನೋಟುಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 100 ಬೊಲಿವರ್ ಬಿಲ್ ವೌಲ್ಯ, ಒಂದು ಡಾಲರ್‌ನ ಮೂರು ಸೆಂಟ್ಸ್ ವೌಲ್ಯಕ್ಕಿಂತಲೂ ಕಡಿಮೆಯದ್ದು. ಒಂದು ಬಿಲ್ ವೌಲ್ಯದಲ್ಲಿ ಕ್ಯಾಂಡಿಯ ಒಂದು ತುಂಡು ಕೂಡ ಸಿಗುವುದು ಕಷ್ಟ, ಒಂದು ಹ್ಯಾಂಬರ್ಗರ್ ಖರೀದಿಗೆ 50 ನೋಟುಗಳನ್ನು ಪಾವತಿಸಬೇಕಾಗುತ್ತದೆ. ಇಂಥ ಆರ್ಥಿಕ ಸಂಕಷ್ಟದ ನಡುವೆ ನೋಟು ರದ್ದತಿ ನಿರ್ಧಾರ ಪ್ರಕಟಿಸಲಾಗಿದೆ.

‘‘ನನ್ನ ಸಾಂವಿಧಾನಿಕ ಅಧಿಕಾರದ ಆಧಾರದಲ್ಲಿ, ಈ ಆರ್ಥಿಕ ತುರ್ತು ಪರಿಸ್ಥಿತಿ ಆದೇಶದ ಮೂಲಕ, ನಾನು 100 ಬೊಲಿವರ್ ಬಿಲ್ ಅನ್ನು ಮುಂದಿನ 72 ಗಂಟೆಗಳಲ್ಲಿ ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ್ದೇನೆ’’ ಎಂದು ಅಧ್ಯಕ್ಷ ನಿಕೊಲಸ್ ಘೋಷಿಸಿದ್ದಾರೆ. ಕಾಂಬೊಡಿಯ ಮತ್ತು ಬ್ರೆಜಿಲ್‌ನಲ್ಲಿರುವ ಅಂತಾರಾಷ್ಟ್ರೀಯ ಮಾಫಿಯಾಗಳ ಬಳಿಯಲ್ಲಿ 100 ಬಿಲ್‌ಗಳ ಕೋಟ್ಯಂತರ ಬೊಲಿವರ್‌ಗಳು ಗೌಪ್ಯವಾಗಿ ಸಂಗ್ರಹಿಸಲ್ಪಟ್ಟಿರುವುದು ತನಿಖೆಯಿಂದ ಪತ್ತೆಯಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿದೇಶದಲ್ಲಿ ಸಂಗ್ರಹಿಸಲ್ಪಟ್ಟಿರುವ ಹಣ ಮರಳಿ ದೇಶದೊಳಗೆ ನುಸುಳದಂತೆ ತಡೆಯಲು ವೆನಿಜುವೆಲಾದ ಎಲ್ಲ ಭೂ, ವಾಯು ಮತ್ತು ಸಾಗರ ಮಾರ್ಗಗಳನ್ನು ತಕ್ಷಣದಿಂದ ಮುಚ್ಚಲಾಗಿದೆ. ಅಕ್ರಮ ಹಣದೊಂದಿಗೆ ನೀವು ಹೊರ ದೇಶದಲ್ಲಿ ಉಳಿಯಬಹುದು, ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿಕೊಲಸ್ ಹೇಳಿದ್ದಾರೆ. ‘‘ಇಷ್ಟೊಂದು ಕಡಿಮೆ ಅವಯಲ್ಲಿ 100 ಬೊಲಿವರ್ ರದ್ದು ಪಡಿಸಿರುವುದರಿಂದ, ಅಷ್ಟೇ ಸಮಾನ ಪ್ರಮಾಣದ ನೋಟುಗಳ ಪೂರೈಕೆಗೆ ಸಿದ್ಧವಾಗಿರಬೇಕು. ಅದು ಸಾಧ್ಯವಾಗುತ್ತದೆ ಎಂದು ನಾನು ನಂಬುವುದಿಲ್ಲ’’ ಎಂದು ವೆನಿಜುವೆಲಾ ಕೇಂದ್ರ ಬ್ಯಾಂಕ್‌ನ ಮಾಜಿ ನಿರ್ದೇಶಕ, ಪ್ರತಿಪಕ್ಷ ನಾಯಕ ಜೋಸ್ ಗುವೆರಾ ಟ್ವೀಟ್ ಮಾಡಿದ್ದಾರೆ.

 

click me!