
ನವದೆಹಲಿ(ಡಿ.13): ನೋಟ್ ಬ್ಯಾನ್ ಎಂಬ ಶಾಕಿಂಗ್ ಸುದ್ದಿ ಘೋಷಿಸಿದ್ದ ಕೇಂದ್ರ ಸರ್ಕಾರ ಈಗ SBI ಬ್ಯಾಂಕ್ ಖಾತೆ ಹೊಂದಿರುವವರಿಗೊಂದು ಸಿಹಿ ಸುದ್ದಿ ನೀಡಿದೆ. ಸರ್ಕಾರ ಜಾರಿಗೊಳಿಸಿದ ಈ ಹೊಸ ನಿಯಮದಿಂದ ಈಗ ಗ್ರಾಹಕರಲ್ಲಿದ್ದ 'ಕ್ಯಾಷ್ ಲಾಸ್' ಎಂಬ ತಲೆನೋವು ದೂರವಾಗಲಿದೆ.
SBI ತನ್ನ ಖಾತೆದಾರರಿಗಾಗಿ ಡೆಬಿಟ್ ಕಾರ್ಡ್'ಗೆ ಸಂಬಂಧಪಟ್ಟಂತೆ ಸುರಕ್ಷತೆಯ ಒಂದು ಅತ್ಯದ್ಭುತ ಕ್ರಮವನ್ನು ಜಾರಿಗೊಳಿಸಿದೆ. SBI ಪರಿಚಯಿಸಿರುವ ಈ ನೂತನ ಯೋಜನೆಯ ಹೆಸರು 'ATM ಕಾರ್ಡ್ ಸ್ವಿಚ್ ಆನ್/ ಆಫ್' ಎಂದಾಗಿದೆ. ಈ ನೂತನ ಕ್ರಮದಿಂದಾಗಿ ನೀವು ಸೈಬರ್ ಕ್ರೈಂ'ನ ಬಲಿಪಶುವಾಗುವುದು ತಪ್ಪುತ್ತದೆ.
SBI ನ ಈ ನೂತನ ಕ್ರಮ ಅದರ ಬ್ಯಾಂಕಿಂಗ್ ಅಪ್ಲಿಕೇಷನ್ 'SBI ಕ್ವಿಕ್'ನಲ್ಲಿ ಲಭ್ಯವಿದೆ. ಇದರಿಂದ ನೀವು ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಸಂಪೂರ್ಣ ಹಿಡಿತ ಹೊಂದಬಹುದಾಗಿದೆ. ಅಂದರೆ ನೀವು ನಿಮ್ಮ ಡೆಬಿಟ್ ಕಾರ್ಡ್'ನ ವಿವಿಧ ಸೌಲಭ್ಯಗಳನ್ನು ನಿಮ್ಮ ಸ್ವ ಇಚ್ಛೆಯಿಂದ ಆನ್ ಹಾಗೂ ಆಫ್ ಮಾಡಬಹುದು. ಉದಾಹರಣೆಗೆ- ನೀವು ಈ ನೂತನ ಕ್ರಮದ ಮೂಲಕ ನಿಮ್ಮ ಕಾರ್ಡ್'ಗಿರುವ ಶಾಪಿಂಗ್ ಸೌಲಭ್ಯವನ್ನು ಆನ್/ ಆಫ್ ಮಾಡಬಹುದು.
ನೋಟ್ ಬ್ಯಾನ್ ಬಳಿಕ ಒಂದೆಡೆ ದೇಶದಾದ್ಯಂತ 'ಕ್ಯಾಷ್ ಲೆಸ್' ಎಂಬ ನೂತನ ಆರ್ಥಿಕ ನೀತಿಯನ್ನು ಉತ್ತೇಜಿಸಲಾಗುತ್ತಿದೆ. ಆದರೆ ಮತ್ತೊಂದೆಡೆ ಈ ಹೊಸ ನೀತಿಯಿಂದ ಸೈಬರ್ ಕ್ರೈಂ ಎಂಬ ಅಪಾಯ ಹೆಚ್ಚಾಗಿ, ತಮ್ಮ ಕಾರ್ಡ್ ಹಾಗೂ ಹಣವನ್ನು ಹೇಗೆ ಕಾಪಾಡುವುದು ಎಂಬ ಚಿಂತೆ ಜನರನ್ನು ಕಾಡಲಾರಂಭಿಸಿದೆ. ಸದ್ಯ SBI ನ ಈ ಹೊಸ ಯೋಜನೆಯಿಂದ ಖಾತೆದಾರರು ಈ ಭಯದಿಂದ ಮುಕ್ತರಾಗಿದ್ದಾರೆ. ಯಾರೇ ಆಗಲಿ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಕಾರ್ಡ್'ನಿಂದ ಹಣ ತೆಗೆಯಲು ಇಲ್ಲವೇ ವ್ಯವಹಾರ ಮಾಡಲು ಸಾಧ್ಯವಿಲ್ಲ.
ಇನ್ನು ನೀವು ಈ ನೂತನ ಕ್ರಮದ ಮೂಲಕ ಕಾರ್ಡ್'ನ ಇ-ಕಾಮರ್ಸ್ ಸೌಲಭ್ಯವನ್ನು ರದ್ದು ಮಾಡಿದರೆ ಆ ಕಾರ್ಡ್'ನಿಂದ ಯಾವುದೇ ಆನ್'ಲೈನ್ ಪೇಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಯೋಜನೆಯ ಮೂಲಕ ನಿಮ್ಮ ಡೆಬಿಟ್ ಕಾರ್ಡ್'ನ ವಿದೇಶಿ ಹಾಗೂ ದೇಶೀ ಬಳಕೆಯ ಮೇಲೂ ನೀವು ಸಂಪೂರ್ಣ ಹಿಡಿತ ಪಡೆಯಬಹುದು.
ಈ ಯೋಜನೆಯನ್ನು ಬಳಸಲು ನೀವು ಆ್ಯಪ್ ಡೌನ್'ಲೋಡ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು SBI ಬ್ಯಾಂಕ್'ನೊಂದಿಗೆ ರಿಜಿಸ್ಟರ್ ಮಾಡಿಕೊಳ್ಳುವುದು ಅನಿವಾರ್ಯ. SBI ನ ಈ 'ಕ್ವಿಕ್ ಆ್ಯಪ್'ನ್ನು ಆ್ಯಂಡ್ರಾಯ್ಡ್, ವಿಂಡೋಸ್, IOS ಹಾಗೂ ಬ್ಲ್ಯಾಕ್'ಬೆರಿ ಮೊಬೈಲ್'ಗಳಲ್ಲಿ ಬಳಸಬಹುದು. SBI ಅನ್ವಯ 70 ಲಕ್ಷಕ್ಕೂ ಅಧಿಕ ಗ್ರಾಹಕರು ಈ 'ಕ್ವಿಕ್ ಆ್ಯಪ್'ನ್ನು ಈಗಾಗಲೇ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.