ಪೆಟ್ರೋಲ್, ಡೀಸೆಲ್ ದರ ಇಳಿಕೆ: ರಾಜೇ ಸರಕಾರ ನಿರ್ಧಾರ

By Web DeskFirst Published Sep 10, 2018, 9:49 AM IST
Highlights

ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ತೆರಿಗೆಯನ್ನು ರಾಜ್ಯಗಳು ಕಡಿತಗೊಳಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅತ್ತ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಪೆಟ್ರೋಲ್ ದರ ಇಳಿಸಿದೆ. 

ಜೈಪುರ: ಪೆಟ್ರೋಲ್, ಡೀಸೆಲ್ ದರಗಳ ಮೇಲಿನ ತೆರಿಗೆಯನ್ನು ರಾಜ್ಯಗಳು ಕಡಿತಗೊಳಿಸಬೇಕು ಎಂಬ ಕೂಗು ಎದ್ದಿರುವ ಮಧ್ಯೆಯೇ ರಾಜಸ್ಥಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಶೇ. 4ರಷ್ಟು ಇಳಿಸಿ ಭಾನುವಾರ ಆದೇಶ ಹೊರಡಿಸಿದೆ.

ಭಾರತ್ ಬಂದ್: ಸೇವೆಯಲ್ಲಿ ವ್ಯತ್ಯಯ

ಇದರಿಂದ ರಾಜಸ್ಥಾನದಲ್ಲಿ ಪೆಟ್ರೋಲ್,  ಡೀಸೆಲ್ ಬೆಲೆ ಸುಮಾರು 2.5 ರು.ನಷ್ಟು ಇಳಿಕೆಯಾಗಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಶೇ.30ರಷ್ಟು ಇದ್ದಿದ್ದು, ಇನ್ನು ಶೇ.26 ಆಗಲಿದೆ. 

ಭಾರತ್ ಬಂದ್: ಎಲ್ಲಿಲ್ಲಿ ತೈಲೆ ಬೆಲೆ ಎಷ್ಟು?

ಇನ್ನು ಡೀಸೆಲ್ ವ್ಯಾಟ್ ಶೇ. 22ರಿಂದ ಶೇ. 18ಕ್ಕಿಳಿಯಲಿದೆ ಎಂದು ರಾಜೇ ಅವರು  ರ್ಯಾಲಿಯೊಂದರಲ್ಲಿ ಘೋಷಿಸಿದರು. ಇದೇ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ದರ ಇಳಿಕೆ ಮಹತ್ವ ಪಡೆದುಕೊಂಡಿದೆ.

click me!