ಆರ್‌ಎಸ್‌ಎಸ್‌ನಿಂದ ದೂರ; ಸಂಕಷ್ಟದಲ್ಲಿ ರಾಜಸ್ಥಾನದ ರಾಣಿ

By Web DeskFirst Published Jun 25, 2019, 12:18 PM IST
Highlights

ವಸುಂಧರಾ ಬಗ್ಗೆ ಮೋದಿ ಮತ್ತು ಶಾ ಇಬ್ಬರಿಗೂ ಸಾಕಷ್ಟು ವಿರೋಧವಿದೆ | ಈಗ ಸ್ಪೀಕರ್‌ ಆಗಿರುವ ಓಂ ಬಿರ್ಲಾ ಅವರು ವಸುಂಧರಾ ವಿರೋಧಿ ಕ್ಯಾಂಪ್‌ನವರು | ಸಂಕಷ್ಟದಲ್ಲಿ ರಾಜಸ್ಥಾನದ ರಾಣಿ

ಮೋದಿ ಮತ್ತು ಶಾ ಒಮ್ಮೆ ಕಣ್ಣು ಇಟ್ಟರೆ ಮುಗಿಯಿತು, ರಾಜಕೀಯವಾಗಿ ಪಕ್ಕಕ್ಕೆ ಸರಿಸುವವರೆಗೆ ಬಿಡುವವರಲ್ಲ. ಇವರಿಬ್ಬರಷ್ಟೇ ಹಠವಾದಿ ವಸುಂಧರಾ ಬಗ್ಗೆ ಮೋದಿ ಮತ್ತು ಶಾ ಇಬ್ಬರಿಗೂ ಸಾಕಷ್ಟು ವಿರೋಧವಿದೆ.

ದೇವೇಗೌಡ್ರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಲು ನೋ ಎಂದ ಪ್ರಜ್ವಲ್

ಒಂದು ಕಾಲದಲ್ಲಿ ಆರ್‌ಎಸ್‌ಎಸ್‌ ಹೇಳಿದರೂ ವಸುಂಧರಾರನ್ನು ಕೇಳದೆ ರಾಜಸ್ಥಾನ ಬಿಜೆಪಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡುತ್ತಿರಲಿಲ್ಲ. ಆದರೆ ಈಗ ಸ್ಪೀಕರ್‌ ಆಗಿರುವ ಓಂ ಬಿರ್ಲಾ ಅವರು ವಸುಂಧರಾ ವಿರೋಧಿ ಕ್ಯಾಂಪ್‌ನವರು.

ರಾಹುಲ್ ಗಾಂಧಿ ಜೊತೆ ಗುರುತಿಸಿಕೊಳ್ಳಲು ಡಿಕೆಶಿಗೆ ಮುಜುಗರ?

ಜೊತೆಗೆ ಕೇಂದ್ರ ಸಚಿವ ಅರ್ಜುನ್‌ ರಾಮ್ ಮೇಘವಾಲ್ ಕೂಡ ವಸುಂಧರಾ ಬದ್ಧ ವಿರೋಧಿ. ಇಷ್ಟೆಲ್ಲ ಸಾಲದೆಂಬಂತೆ ‘ಮಹಾರಾಣಿ’ ಎಷ್ಟೇ ಬೇಡಿಕೊಂಡರೂ ಕೇಳದೆ ರಾಜಸ್ಥಾನದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕತ್ವದಿಂದ ವಸುಂಧರಾರನ್ನು ದೂರವಿಟ್ಟು ಗುಲಾಬ್ ಕಟಾರಿಯಾ ಅವರನ್ನು ವಿರೋಧಿ ನಾಯಕನನ್ನಾಗಿ ಮಾಡಲಾಗಿದೆ. ವಸುಂಧರಾ ಆರ್‌ಎಸ್‌ಎಸ್‌ ಅನ್ನು ದೂರ ಮಾಡಿದ ತಪ್ಪಿಗೆ ಮೋದಿ ಮತ್ತು ಶಾ ಮುಂದೆ ಅಸಹಾಯಕರಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಕ್ಲಿಕ್ ಮಾಡಿ 

click me!