ವಾರ್ಧಾ: ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

By Suvarna Web DeskFirst Published Dec 15, 2016, 6:00 AM IST
Highlights

ಕಾರ್ಮಿಕರಿಲ್ಲದೇ ಬೆಳೆಗಾರರು ಒಂದೆಡೇ ಪರದಾಡುತ್ತಿದ್ದರೇ, ಇನ್ನೊಂದು ಕಡೆ ಅಕಾಳಿಕ ಮಳೆ ಬಂದಿದ್ದರಿಂದ ತೋಟಗಳಲ್ಲಿ ಕಾಫಿ ಹಣ್ಣಾಗಿ ನಿಂತಿದ್ದು, ಮಳೆಯಿಂದಾಗಿ ಕಾಫಿ ಮತ್ತು ಮೆಣಸು ಉದುರಿ ಮಣ್ಣಾಗುತ್ತಿದೆ.

ಚಿಕ್ಕಮಗಳೂರು (ಡಿ.15): ಕಳೆದ ಎರಡು ದಿನಗಳಿಂದ ವಾರ್ಧಾ ಅಬ್ಬರಕ್ಕೆ ಸುರಿದ ಅಕಾಲಿಕ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಕಾಫಿ ತೋಟಗಳಲ್ಲಿ ಹಣ್ಣಾಗಿ ನಿಂತಿದ್ದ ಕಾಫಿ ಹಣ್ಣುಗಳು ಉದುರಿ ಮಣ್ಣು ಪಾಲಾಗುತ್ತಿದೆ.

ಕಾರ್ಮಿಕರಿಲ್ಲದೇ ಬೆಳೆಗಾರರು ಒಂದೆಡೇ ಪರದಾಡುತ್ತಿದ್ದರೇ, ಇನ್ನೊಂದು ಕಡೆ ಅಕಾಳಿಕ ಮಳೆ ಬಂದಿದ್ದರಿಂದ ತೋಟಗಳಲ್ಲಿ ಕಾಫಿ ಹಣ್ಣಾಗಿ ನಿಂತಿದ್ದು, ಮಳೆಯಿಂದಾಗಿ ಕಾಫಿ ಮತ್ತು ಮೆಣಸು ಉದುರಿ ಮಣ್ಣಾಗುತ್ತಿದೆ. ಮೊದಲ್ಲೇ ಸಾಲ ಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಕೈಗೆ ಸಿಗದೇ ಕಣ್ಣು ಎದುರಲ್ಲಿಯೇ ನಾಶವಾಗುತ್ತಿದ್ದು ರೈತರಿಗೆ ಭಾರೀ ನೋವು ಉಂಟುಮಾಡಿದೆ. ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದೂ ಕಾಫಿ ಬೆಳೆಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

click me!