ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬ: ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣುಗಳು ದುಬಾರಿ

Published : Aug 04, 2017, 08:10 AM ISTUpdated : Apr 11, 2018, 12:49 PM IST
ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬ: ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣುಗಳು ದುಬಾರಿ

ಸಾರಾಂಶ

ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆ ಕಾತುರರಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಹಬ್ಬ ಅಂದ್ರೆ ಕೇಳಬೇಕು ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಗಗನಕ್ಕೇರಿರುತ್ತೆ.

ಬೆಂಗಳೂರು(ಆ.04): ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆ ಕಾತುರರಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಹಬ್ಬ ಅಂದ್ರೆ ಕೇಳಬೇಕು ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಗಗನಕ್ಕೇರಿರುತ್ತೆ.

ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಹೂ - ಹಣ್ಣುಗಳ ದರ ದುಪ್ಪಟ್ಟಾಗಿದೆ. ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ಬೆಲೆಯಿದೆ. ಹಾಗಾದ್ರೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಯಾವ ಯಾವ ರೀತಿ ದರ ಎಂಬುದನ್ನು ನೋಡುವುದಾದರೆ.

ಕೆ ಆರ್ ಮಾರ್ಕೆಟಲ್ಲಿ ಕೆಜಿ ಕನಕಾಂಬರಕ್ಕೆ 1600ರೂ ಇದ್ದರೆ, ಮಲ್ಲೆಶ್ವರಂ ಮಾರ್ಕೆಟಲ್ಲಿ ಕೆಜಿ ಕನಕಾಂಬರಕ್ಕೆ ಬರೋಬ್ಬರಿ  2000ರೂ ಇದೆ. ಕಾಕಡ ಮಲ್ಲಿಗೆಗೆ ಕೆ ಆರ್ ಮಾರ್ಕೆಟಲ್ಲಿ ಕೆಜಿಗೆ 400 ರೂಪಾಯಿ ಇದ್ರೆ,  ಮಲ್ಲೆಶ್ವರಂ ಮಾರ್ಕೆಟಲ್ಲಿ 600 ರೂಪಾಯಿ ಆಗಿದೆ. ಗುಲಾಬಿ ಕೆಜಿಗೆ ಕೆ ಆರ್ ಮಾರ್ಕೆಟಲ್ಲಿ  240 ರೂ ಇದ್ರೆ,  ಮಲ್ಲೆಶ್ವರಂ ಮಾರ್ಕೆಟಲ್ಲಿ 300 ರೂ ಆಗಿದೆ. ಮಲ್ಲಿಗೆ ಕೆಜಿಗೆ ಕೆ ಆರ್ ಮಾರ್ಕೆಟಲ್ಲಿ 800 ರು ಇದ್ರೆ,  ಮಲ್ಲೇಶ್ವರಂ ಮಾರ್ಕೆಟಲ್ಲಿ ಬರೋಬ್ಬರಿ 1000 ಇದೆ. ಸುಗಂಧರಾಜ ಕೆಜಿಗೆ ಕೆ.ಆರ್ ಮಾರ್ಕೆಟಲ್ಲಿ 160 ಆದರೆ ಮಲ್ಲೇಶ್ವರಂ ಮಾರ್ಕೆಟಲ್ಲಿ 400 ರೂ ಇದೆ. ಇನ್ನು  ಲಕ್ಷ್ಮಿಗೆ ಪ್ರಿಯವಾದ ತಾವರೆ ಜೋಡಿಗೆ ಕೆ.ಆರ್ ಮಾರ್ಕೆಟಲ್ಲಿ 100 ರೂಪಾಯಿ ಇದ್ರೆ, ಮಲ್ಲೇಶ್ವರಂನಲ್ಲಿ 160 ರೂಪಾಯಿ ಇದೆ.

ಇನ್ನು ಲಕ್ಷ್ಮಿ ಪೂಜೆಗೆ ಹಣ್ಣುಗಳು ಇರಲೇಬೇಕು. ಲಕ್ಷ್ಮಿಗೆ ಪ್ರಿಯವಾದ ಸೇಬು ಕೆಜಿಗೆ 160 ರೂ. ಇದ್ದರೆ. ದಾಳಿಂಬೆ 140 ರೂ ಇದೆ. ಬಾಳೆ ಹಣ್ಣು ಕೆಜಿ 100 ರೂಪಾಯಿ ಆಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಹೂವು -ಹಣ್ಣುಗಳ ದರ ಗಗನಕ್ಕೇರುತ್ತಿದ್ದು, ಗ್ರಾಹಕರು ವಿಧಿ ಇಲ್ಲದೆ ಖರೀದಿಸಬೇಕಿದೆ.

ಒಟ್ಟಾರೆ ಈ ಬಾರಿ ವರಮಹಾಲಕ್ಷ್ಮಿ ಪೂಜೆ ಎಲ್ಲರಿಗೂ ಸಂತಸ ತರಲಿ. ನಮ್ಮ ಕಡೆಯಿಂದಲೂ ನಾಡಿನ ಸಮಸ್ತೆ ಜನತೆಗೆ ವರಮಹಾಲಕ್ಷ್ಮಿ ಹಬ್ವದ ಶುಭಾಶಯಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!