
ಬೆಂಗಳೂರು: ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಸಾಹಿತಿ ಹಾಗೂ ನಿರ್ದೇಶಕ ಡಾ. ವಿ.ನಾಗೇದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ. ಭಾನುವಾರ ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ನಿರ್ದೇಶಕರ ಸಂಘದ ಸರ್ವಸದಸ್ಯರ ಸಭೆಯಲ್ಲಿ ನಾಗೇಂದ್ರ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಿರಿಯ ನಿರ್ದೇಶಕ ಜೋಸೈಮನ್ ಹಾಗೂ ಎಸ್. ಮುರುಳಿ ಮೋಹನ್, ಕಾರ್ಯದರ್ಶಿಗಳಾಗಿ ದಯಾಳ್ ಪದ್ಮನಾಭನ್ ಹಾಗೂ ಸುನೀಲ್ ಪುರಾಣಿಕ್ ಮತ್ತು ಖಜಾಂಚಿಯಾಗಿ ಕೆ.ಎ ವೈದ್ಯನಾಥನ್ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾದ ಮುಸ್ಸಂಜೆ ಮಹೇಶ್, ಶಿವಕುಮಾರ್, ಗುರು ಪ್ರಸಾದ್, ಎಬಿಸಿಡಿ ಶಾಂತ ಕುಮಾರ್, ಚಂದ್ರಹಾಸ್, ಮಳವಳ್ಳಿ ಸಾಯಿಕೃಷ್ಣ, ಅನಂತರಾಜು ಹಾಗೂ ಬೂದಾಳ್ ಕೃಷ್ಣ ಮೂರ್ತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್, "ಇದೊಂದು ಹುದ್ದೆ ಎನ್ನುವುದಕ್ಕಿಂತ ಒಂದು ಜವಾಬ್ದಾರಿ. ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಮೂಲಕ ಒಳ್ಳೆಯ ದಿನಗಳನ್ನು ಕಟ್ಟಬೇಕಿದೆ. ಆದರ ಕಡೆ ನಾವು ಹೆಜ್ಜೆ ಹಾಕಲಿದ್ದೇವೆ" ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.