ಗೋವಿಗೆ ರಾಷ್ಟ್ರ ಮಾತೆ ಸ್ಥಾನ : ವಿಧಾನಸಭೆ ನಿರ್ಣಯ

By Web DeskFirst Published Sep 20, 2018, 2:21 PM IST
Highlights

ಗೋವಿಗೆ ರಾಷ್ಟ್ರಮಾತೆ ಸ್ಥಾನವನ್ನು ನೀಡುವ ನಿರ್ಣಯವನ್ನು ಉತ್ತರಾಖಂಡ್ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ.  ಪಶುಸಂಗೋಪನೆ ಸಚಿವೆ ರೇಖಾ ಆರ್ಯ ಅವರು, ಈ ಕುರಿತಾದ ನಿರ್ಣಯವನ್ನು ಪ್ರಸ್ತಾಪಿಸಿದರು.

ಡೆಹ್ರಾಡೂನ್: ಗೋವಿಗೆ ‘ರಾಷ್ಟ್ರ ಮಾತೆ’ ಸ್ಥಾನ ಮಾನ ನೀಡುವ ನಿರ್ಣಯವನ್ನು ಉತ್ತರಾಖಂಡ್ ವಿಧಾನಸಭೆ ಅಂಗೀಕರಿಸಿದೆ. ಬುಧವಾರದ ವಿಧಾನಸಭೆ ಅಧಿವೇಶನದಲ್ಲಿ ಪಶುಸಂಗೋಪನೆ ಸಚಿವೆ ರೇಖಾ ಆರ್ಯ ಅವರು, ಈ ಕುರಿತಾದ ನಿರ್ಣಯವನ್ನು ಪ್ರಸ್ತಾಪಿಸಿದರು.

 ಈ ವೇಳೆ ಕಾಂಗ್ರೆಸ್ ಶಾಸಕಿ ಹಾಗೂ ಪ್ರತಿಪಕ್ಷ ನಾಯಕಿಯೂ ಆದ ಇಂದಿರಾ ಹೃದಯೇಶ್ ಅವರು, ಗೋವಿಗೆ ‘ರಾಷ್ಟ್ರ ಮಾತೆ’ ಸ್ಥಾನಮಾನ  ನೀಡುತ್ತಿ ರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

ಇದಕ್ಕೆ ಸಚಿವೆ ರೇಖಾ, ‘ರಾಷ್ಟ್ರದಲ್ಲೇ ಗೋ ಹತ್ಯೆ ನಿಷೇಧಿಸಬೇಕು ಎಂಬುದು ನಮ್ಮ ಕಳಕಳಿಯಾಗಿದೆ,’ ಎಂದರು.

ಉತ್ತರಾಖಂಡ್ ಹೈ ಕೋರ್ಟ್ ಕಳೆದ ವರ್ಷ ಗಂಗಾ ಹಾಗೂ ಯಮುನಾ ನದಿಗೆ ಜೀವಂತ ವ್ಯಕ್ತಿಯ ಸ್ಥಾನಮಾನವನ್ನು ನೀಡಬೇಕು ಎಂದೂ ಕೂಡ ಹೇಳಿತ್ತು. ಅದರಂತೆ ಇದೀಗ ಇಲ್ಲಿನ ವಿಧಾನಸಭೆ ಗೋವಿನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. 

ಇಷ್ಟೇ ಅಲ್ಲದೇ ಕೆಲ ದಿನಗಳ ಹಿಂದೆ  ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಕಸಾಯಿಖಾನೆ ತೆರೆಯಬಾರದು. ಇದು ದೇವ ಭೂಮಿ ಎಂದೂ ಕೂಡ ಹೇಳಿದ್ದರು. 

click me!