
ಬೆಂಗಳೂರು[ಸೆ.20] ಒಂದು ಕಡೆ ಸಿಎಂ ಕುಮಾರಸ್ವಾಮಿ ಮಾತನಾಡುತ್ತ ಬಿಜೆಪಿ ನಾಯಕರು ಏನೂ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೆ ಶಾಸಕರ ಮುಂಬೈ ಪ್ರವಾಸದ ಮಾಹಿತಿಯನ್ನು ಹೇಳಿದ್ದರು. ಕಳೆದ ಒಮದು ತಿಂಗಳಿನಿಂದ ನಡೆಯುತ್ತಿದ್ದ ಪೊಲಿಟಿಕಲ್ ಹೈ ಡ್ರಾಮಾ ಅಂತ್ಯ ಕಾಲ ಹತ್ತಿರವಾಗಿದ್ದು 22 ಶಾಸಕರು ಮುಂಬೈ ಸೇರಿರುವುದು ಪಕ್ಕಾ ಆಗಿದೆ.
ಒಂದು ಕಡೆ ಮನೆಯಿಂದ ಹೊರಬಂದು ಮಾತನಾಡಿದ ಬಿಎಸ್ ವೈ ಕುಮಾರಸ್ವಾಮಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಮುಂಬೈಗೆ ಹಾರುರುವ ಶಾಸಕರು ಯಾರು? ಯಾವ ಯಾವ ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ?
"
ಎಚ್‌ಡಿಕೆಗೆ ಅರ್ಧ ಗಂಟೆಯಲ್ಲೇ ಬಿಎಸ್‌ವೈ ಕೊಟ್ಟ ತಿರುಗೇಟು ಎಂಥದ್ದು!
ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆಡಳಿತ ಪಕ್ಷದ 22 ಶಾಸಕರು ಮುಂಬೈ ತೆರಳಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಹೀರೆಕೆರೂರು ಶಾಸಕ ಬಿಸಿ ಪಾಟೀಲ್ ಸಹ ರಮೇಶ್ ಜಾರಕೊಹೊಳಿ ಜತೆಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂಧಾನವೂ ವ್ಯರ್ಥವಾಗಿದೆ.
ಕೆಲ ಜೆಡಿಎಸ್ ಶಾಸಕರು ಈ ಗುಂಪಿನಲ್ಲಿ ಇರುವುದನ್ನು ಜೆಡಿಎಸ್ ಅರಗಿಸಿಕೊಳ್ಳಲೇಬೇಕು. ಬಳ್ಳಾರಿ, ಕೋಲಾರ ಸೇರಿದಂತೆ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಕದ ಶಾಸಕರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.