
ಬೆಂಗಳೂರು (ಡಿ.27): ನಮಗೆ ನಮ್ಮ ಜೀವಜಲ ಬೇಕು, ಮಹದಾಯಿ ನಮ್ಮ ಹಕ್ಕು ಎಂದು ಉತ್ತರ ಕರ್ನಾಟಕ ಜನ ಹೋರಾಟಕ್ಕಿಳಿದಿದ್ದಾರೆ. ರಾಜಕೀಯದಾಟ ನೋಡಿ ಸಿಡಿದೆದ್ದ ಅನ್ನದಾತರು, ಇಂದು ಉತ್ತರ ಕರ್ನಾಟಕ ಬಂದ್ ಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಕೆಲ ಸೇವೆಗಳಲ್ಲಿ ವ್ಯತ್ಯಯ ಆಗಲಿದ್ದು, ಇಂದು ಏನೇನು ಇರುತ್ತೆ, ಏನೇನು ಇರಲ್ಲ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮಹದಾಯಿ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಷ್ಟುದಿನ ಬೆಂಗಳೂರಲ್ಲಿ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿದ್ದ ಹೋರಾಟ ಇವತ್ತು ತೀವ್ರಸ್ವರೂಪ ಪಡೆದುಕೊಂಡಿದೆ. ಯೋಜನೆ ಇತ್ಯಾರ್ಥಕ್ಕೆ ಪ್ರಧಾಣಿ ಮಧ್ಯಸ್ಥಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಕಳಸಾ-ಬಂಡೂರಿ ಮಲಪ್ರಭಾ ಜೋಡಣೆ ಸಮನ್ವಯ ಸಮಿತಿ ಕರೆ ನೀಡಿದ ಬಂದ್ಗೆ 100 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ಚಂಪಾ ನೇತೃತ್ವದ ಕರ್ನಾಟಕ ಸ್ವಾಭಿಮಾನಿ ವೇದಿಕೆ ಮತ್ತು ಸ್ಯಾಂಡಲ್ ವುಡ್ ತಾರೆಯರು ಕೂಡ ಸಾಥ್ ಸಾಥ್ ನೀಡುತ್ತಿದ್ದಾರೆ.
ಎಲ್ಲೆಲ್ಲಿ ಬಂದ್ ?
ಹುಬ್ಬಳ್ಳಿ-ಧಾರವಾಡ ಸಂಪೂರ್ಣ ಬಂದ್
ಗದಗ, ನವಲಗುಂದ ಸಂಪೂರ್ಣ ಬಂದ್
ಬಾಗಲಕೋಟೆ, ನರಗುಂದ ಸಂಪೂರ್ಣ ಬಂದ್
ಬೆಳಗಾವಿ, ಬೈಲಹೊಂಗಲ, ಸವದತ್ತಿ ಬಂದ್
ರಾಮದುರ್ಗ, ವಿಜಯಪುರ ಭಾಗಶಃ ಬಂದ್
ಏನೇನು ಇರುತ್ತೆ?
ಮೆಡಿಕಲ್ ಸ್ಟೋರ್ , ಆಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯ
ಹಾಲು ಮಾರಾಟ ಮತ್ತು ದಿನ ಪತ್ರಿಕೆ ಮಾರಾಟ ಯಥಾಸ್ಥಿತಿ
ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ಬಸ್, ಆಟೋ, ಖಾಸಗಿ ವಾಹನ ಯಥಾಸ್ಥಿತಿ
ಬಾಗಲಕೋಟೆಯಲ್ಲಿ ಹೋಟೆಲ್, ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿರುತ್ತವೆ
ಧಾರವಾಡದಲ್ಲಿ ಆಟೋ ರಿಕ್ಷಾಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ
ಗದಗ್ನಲ್ಲಿ ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿ
ಏನೇನು ಇರಲ್ಲ?
ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್
ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ ಶಾಲೆ-ಕಾಲೇಜುಗಳಿಗೆ ರಜೆ
ಭಾಗಶಃ ಹೋಟೆಲ್‍ಗಳಿಗೆ ಬೀಗ, ಎಪಿಎಂಸಿ ಚಟುವಟಿಕೆ ಸ್ತಬ್ಧ
ಗದಗ, ಧಾರವಾಡ, ಹುಬ್ಬಳ್ಳಿಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತ
ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಸರ್ಕಾರಿ ಬಸ್ ಸಂಚಾರ ಸ್ಥಗಿತ
ಬೆಳಿಗ್ಗೆ 6 ರಿಂದ ಸಂಜೆ 6 ರವೆರೆಗೂ ಚಿತ್ರ ಪ್ರದರ್ಶನ ಸ್ಥಗಿತ
ಇಂದು ನಡೆಯ ಬೇಕಿದ್ದ ಎಲ್ಎಲ್ಬಿ, ವಿಟಿಯು ಪರೀಕ್ಷೆಗಳು ಮುಂದೂಡಿಕೆ
ಬಾಗಲಕೋಟೆ ಒರತು ಪಡಿಸಿ ಉಳಿದ ಕಡೆ ಹೋಟೇಲ್ ಗಳು ಬಂದ್
ಹುಬ್ಬಳ್ಳಿ, ಗದಗ, ಧಾರವಾಡದಲ್ಲಿ ಪೆಟ್ರೋಲ್ ಬಂಕ್ ಬಂದ್
ಬೆಳಿಗ್ಗೆ 6 ರಿಂದ ಸಂಜೆ 6ಗಂಟೆವರೆಗೆ ಎಲ್ಲಾ ಬಾರ್ಗಳು ಬಂದ್
ಗದಗ ಜಿಲ್ಲೆ 5 ತಾಲೂಕಿನ ಪೈಕಿ ನರಗುಂದ ಪಟ್ಟಣ ಪೂರ್ಣ ಬಂದ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.