2018ಕ್ಕೆ ಬ್ರಿಟನ್ ಹಿಂದಿಕ್ಕಿ ಭಾರತ ವಿಶ್ವದ 5ನೇ ಆರ್ಥಿಕ ಶಕ್ತಿಯಾಗಲಿದೆ

By suvarna Web DeskFirst Published Dec 27, 2017, 7:57 AM IST
Highlights

ಹಲವು ಆರ್ಥಿಕ ಸುಧಾರಣೆ ಕೈಗೊಳ್ಳುವ ಮೂಲಕ ಉದ್ದಿಮೆ ಸ್ನೇಹಿ ದೇಶಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಜಿಗಿತ ಕಂಡಿರುವ ಭಾರತಕ್ಕೆ ಹೊಸ ವರ್ಷದಲ್ಲಿ ಮತ್ತೊಂದು ಗೌರವ ಸಿಗಲಿದೆ.

ಲಂಡನ್ (ಡಿ.27): ಹಲವು ಆರ್ಥಿಕ ಸುಧಾರಣೆ ಕೈಗೊಳ್ಳುವ ಮೂಲಕ ಉದ್ದಿಮೆ ಸ್ನೇಹಿ ದೇಶಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಜಿಗಿತ ಕಂಡಿರುವ ಭಾರತಕ್ಕೆ ಹೊಸ ವರ್ಷದಲ್ಲಿ ಮತ್ತೊಂದು ಗೌರವ ಸಿಗಲಿದೆ.

ಬ್ರಿಟನ್ ಹಾಗೂ ಫ್ರಾನ್ಸ್‌ನಂತಹ ಬಲಾಢ್ಯರನ್ನು ಹಿಂದಿಕ್ಕಿ ಡಾಲರ್ ರೂಪದಲ್ಲಿ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಭವಿಷ್ಯ ನುಡಿದಿದೆ.

2018ರಲ್ಲಿ ಫ್ರಾನ್ಸ್ ಹಾಗೂ ಬ್ರಿಟನ್ ಅನ್ನು ಭಾರತ ಆರ್ಥಿಕತೆಯಲ್ಲಿ ಹಿಂದಿಕ್ಕಿ, ಐದನೇ ಅತಿದೊಡ್ಡ ಶಕ್ತಿಯಾಗಲಿದೆ ಎಂದು ಆರ್ಥಿಕ ಹಾಗೂ ಉದ್ಯಮ ಸಂಶೋಧನಾ ಕೇಂದ್ರದ 2018ರ ವಿಶ್ವ ಅರ್ಥಿಕ ಲೀಗ್ ಪಟ್ಟಿ ತಿಳಿಸಿದೆ.

click me!