ಬುರ್ಖಾ ಧರಿಸಿ ಬಂದ ಯುವತಿಯರನ್ನು ಬೆತ್ತ ಹಿಡಿದು ಓಡಿಸಿದ ಪ್ರಾಂಶುಪಾಲ!

By Web Desk  |  First Published Sep 10, 2019, 5:04 PM IST

ಕಾಲೇಜಿಗೆ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು| ಸಮವಸ್ತ್ರವಲ್ಲ, ಬುರ್ಖಾ ಧರಿಸಿದ್ರೆ ಕಾಲೇಜಿಗೆ ಬರ್ಬೇಡಿ| ಬೆತ್ತ ಹಿಡಿದು ವಿದ್ಯಾರ್ಥಿನಿಯರನ್ನು ೋಡಿಸಿದ ಪ್ರಾಂಶುಪಾಲ


ಲಕ್ನೋ[ಸೆ.10]: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಗೆ ಸಂಬಂಧಿಸಿದಂತೆ ಜಗಳವಾಗುವುದು ಸಾಮಾನ್ಯ. ಜೀನ್ಸ್ ಪ್ಯಾಂಟ್ ಹಾಕಬೇಡಿ, ಪಾಶ್ಚಿಮಾತ್ಯ ಉಡುಗೆಗಳು ಬೇಡ, ಪಾರಂಪರಿಕ ಬಟ್ಟೆ ಧರಿಸಿ ಎಂಬ ನಿಯಮಗಳನ್ನು ವಿಧಿಸುತ್ತಾರೆ. ಆದರೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ವಿಚಿತ್ರ ದೃಶ್ಯವೊಂದು ಕಂಡು ಬಂದಿದ್ದು, ಇಲ್ಲಿ ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಬೆತ್ತ ಹಿಡಿದು ಓಡಿಸಿದ್ದಾರೆ.

ಹೌದು SRK ಪದವಿ ಕಾಲೇಜು ಆವರಣದಲ್ಲಿ ಬುರ್ಖಾ ನಿಷೇಧಿಸಿದೆ. ಹೀಗಿರುವಾಗ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬುರ್ಖಾ ಧರಿಸಿ ಬಂದಿದ್ದು, ಕಾಲೇಜಿನ ಪ್ರಾಂಶುಪಾಲರು ಬೆತ್ತ ಹಿಡಿದು ಓಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿದ್ದು, 'ಬಸ್ ಸ್ಟಾಪ್ ನಲ್ಲೇ ಬುರ್ಖಾ ಕಳಚಿ, ಕಾಲೇಜಿಗೆ ಪ್ರವೇಶಿಸಲು ತಿಳಿಸಿದ್ದಾರೆ' ಎಂದು ದೂರಿದ್ದಾರೆ. ಈ ವಿಚಾರ ಭಾರೀ ವಿವಾದ ಸೃಷ್ಟಿಸಿದ್ದು, ಮುಸ್ಲಿಂ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

Tap to resize

Latest Videos

ಬುರ್ಖಾ ನಂತರ ವೇಲ್ ತೆಗೀರಿ ಅಂದ್ರು.. ಮೆಟ್ರೋದಲ್ಲಿ ಇದೆಂಥ ಪ್ರಕರಣ!

ವಿಡಿಯೋ ಕುರಿತಾಗಿ ಪ್ರತಿಕ್ರಿಯಿಸಿರುವ  SRK ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭಾಸ್ ಕರ್ ರಾಯ್ 'ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರವಿದೆ. ಗುರುತಿ ಚೀಟಿ ಹಾಗೂ ಸಮವಸ್ತ್ರವಿಲ್ಲದೇ ಯಾವೊಬ್ಬ ವಿದ್ಯಾರ್ಥಿ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ ಎಂದು ಈ ಮೊದಲೇ ತಿಳಿಸಿದ್ದೇವೆ. ಬುರ್ಖಾ ಸಮವಸ್ತ್ರವಲ್ಲ. ಕಾಲೇಜು ಆವರಣದಲ್ಲಿ ಸಮವಸ್ತ್ರ ಧರಿಸಿದರಷ್ಟೇ ಪ್ರವೇಶ ನೀಡುತ್ತೇವೆ' ಎಂದಿದ್ದಾರೆ.

ಸದ್ಯ ಈ ವಿಚಾರ ವಿವಾದಕ್ಕೀಡಾಗಿದ್ದು, ಕಾಲೇಜು ಆವರಣದಲ್ಲಿ ಪೊಲೀಸ್ ನಿಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ 'ನೀವು ಬಸ್ ಸ್ಟ್ಯಾಂಡ್ ಬಳಿ ಬುರ್ಖಾ ಕಳಚಿ ಬನ್ನಿ, ಕಾಲೇಜು ಆವರಣದಲ್ಲಿ ಇದನ್ನು ನಿಷೇಧಿಸಿದ್ದಾರೆ' ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇತ್ತ ವಿದ್ಯಾರ್ಥಿನಿಯರು ಮಾತ್ರ 'ನಾವು ಈ ಮೊದಲೂ ಬುರ್ಖಾ ಧರಿಸಿ ಬರುತ್ತಿದ್ದೆವು. ಅಚಾನಕ್ಕಾಗಿ ಈ ನಿಯಮ ಜಾರಿಗೊಳಿಸಿದ್ದಾರೆ' ಎಂದು ಹೇಳಿದ್ದಾರೆ.

'ಬುರ್ಖಾ ನಿಷೇಧಿಸಿದರೆ, ಗೂಂಗಟ್‌ಗೂ ನಿಷೇಧ ಹಾಕಿ'

click me!