50 ವರ್ಷ ಲಿವಿಂಗ್ ಇನ್ ರಿಲೇಷನ್ಶಿಪ್'ನಲ್ಲಿದ್ದ ಜೋಡಿ: ಮಕ್ಕಳೇ ಮಾಡಿಸಿದರು ಮದುವೆ

By Suvarna Web DeskFirst Published Jun 1, 2017, 12:23 PM IST
Highlights

ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಕೊಂಚ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಪಾಶ್ಚಿಮಾತ್ಯ ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು. ಆದರೀಗ ಉತ್ತರ ಪ್ರದೇಶದಲ್ಲಿ ಬಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬಾರಾಂಬರಿ ಜಿಲ್ಲೆಯಲ್ಲಿ ಮದುವೆಯೊಂದು ನಡೆದಿದ್ದು, ಇಲ್ಲಿದ್ದ ವರ 80ರ ಹರೆಯದವರು ಹಾಗೂ ವಧುವಿಗೆ 70 ವರ್ಷ. ಆದರೆ ಈ ಮದುವೆ ಇಷ್ಟೊಂದು ಚರ್ಚೆಗೀಡಾಗಲು ಕಾರಣವಾಗಿದ್ದೇನೆಂದರೆ ವಧು- ವರರಿಬ್ಬರೂ ಪ್ರೇಮಿಗಳಾಗಿದ್ದು, ಕಳೆದ 50 ವರ್ಷಗಳಿಂದ ಜೊತೆಗಿದ್ದರು ಅಂದರೆ ಲಿವ್ ಇನ್ ರಿಲೇಶನ್ಶಿಪ್'ನಲ್ಲಿದ್ದರು. ಸದ್ಯ ಇವರ ಈ ಮದುವೆ ಸಾಮಾಜಿಕ ಜಾಲಾತಾಣದಲ್ಲೂ ವೈರಲ್ ಆಗುತ್ತಿದೆ.

ಉತ್ತರಪ್ರದೇಶ(ಜೂ.01): ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಕೊಂಚ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಪಾಶ್ಚಿಮಾತ್ಯ ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು. ಆದರೀಗ ಉತ್ತರ ಪ್ರದೇಶದಲ್ಲಿ ಬಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬಾರಾಂಬರಿ ಜಿಲ್ಲೆಯಲ್ಲಿ ಮದುವೆಯೊಂದು ನಡೆದಿದ್ದು, ಇಲ್ಲಿದ್ದ ವರ 80ರ ಹರೆಯದವರು ಹಾಗೂ ವಧುವಿಗೆ 70 ವರ್ಷ. ಆದರೆ ಈ ಮದುವೆ ಇಷ್ಟೊಂದು ಚರ್ಚೆಗೀಡಾಗಲು ಕಾರಣವಾಗಿದ್ದೇನೆಂದರೆ ವಧು- ವರರಿಬ್ಬರೂ ಪ್ರೇಮಿಗಳಾಗಿದ್ದು, ಕಳೆದ 50 ವರ್ಷಗಳಿಂದ ಜೊತೆಗಿದ್ದರು ಅಂದರೆ ಲಿವ್ ಇನ್ ರಿಲೇಶನ್ಶಿಪ್'ನಲ್ಲಿದ್ದರು. ಸದ್ಯ ಇವರ ಈ ಮದುವೆ ಸಾಮಾಜಿಕ ಜಾಲಾತಾಣದಲ್ಲೂ ವೈರಲ್ ಆಗುತ್ತಿದೆ.

ಆರ್ಥಿಕ ಸಮಸ್ಯೆಯಿಂದ ಮದುವೆಯಾಗದ ಜೋಡಿ

ಮಾಧ್ಯಮದಲ್ಲಿ ಪ್ರಸಾರವಾದ ವರದಿಯನ್ವಯ ಬಾನುಪುರದಲ್ಲಿ ವಾಸವಿರುವ ಸುಕುಮಾರ್ ಹಾಗೂ ರಜ್'ಪತಾ ದೇವಿ ಇಬ್ಬರ ನಡುವೆ ಯುವ ಪ್ರಾಯದಲ್ಲೇ ಪ್ರೇಮಾಂಕುರವಾಗಿತ್ತು. ಆದರೆ ಆ ಸಮಯದಲ್ಲಿ ಸುಕುಮಾರ್ ತುಂಬಾ ಬಡವನಾಗಿದ್ದು, ರಜ್'ಪತಾಳೊಂದಿಗೆ ಮದುವೆಯಾಗುವಷ್ಟು ಹಣವೂ ಆತನ ಬಳಿ ಇರಲಿಲ್ಲ. ಹೀಗಾಗಿ ಇಬ್ಬರೂ ಮದುವೆಯಾಗದೆ ಜೊತೆಗಿರಲು ನಿರ್ಧರಿಸಿದ್ದಾರೆ. ಬಳಿಕ ದಿನಗೂಲಿ ಕೆಲಸ ಮಾಡಿ ಬಹಳ ಕಷ್ಟದಿಂದ ಜೀವನ ಸಾಗಿಸಿದ್ದಾರೆ. ಈ ವೇಳೆ ಇವರ ಕುಟುಂಬ ವೃದ್ಧಿಸಿದ್ದು, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಮಕ್ಕಳು ಕುಟುಂಬದ ಭಾಗವಾಗಿದ್ದಾರೆ. ಬಿಡುವಿಲ್ಲದ ಜೀವನದಲ್ಲಿ ಇಬ್ಬರಿಗೂ ತಾವಿನ್ನೂ ಮದುವೆಯಾಗಿಲ್ಲ ಎಂಬ ವಿಚಾರವೇ ಮರೆತು ಹೋಗಿದೆ. ಇಂದು ಇವರ ಮಕ್ಕಳಿಗೂ ಮಕ್ಕಳಾಗಿವೆ, ಅಂದರೆ ಸುಕುಮಾರ್ ಹಾಗೂ ರಾಜ್'ಪತಾ ದೇವಿ ಇಬ್ಬರೂ ಅಜ್ಜ- ಅಜ್ಜಿ ಆಗಿದ್ದಾರೆ.

ಮೊಮ್ಮಕ್ಕಳಿಂದಲೇ ಮದುವೆ ದಿಬ್ಬಣ

ತಮ್ಮ ಜೀವನದ ಬಗ್ಗೆ ಮಾತನಾಡಿರುವ ಸುಕುಮಾರ್ 'ತನ್ನ ಹಾಗೂ ರಾಜ್'ಪತಾ ನಡುವಿನ ಸಂಬಂಧ ಅದೆಷ್ಟು ಗಟ್ಟಿಯಾಗಿದೆ ಎಂದರೆ ಯಾವತ್ತೂ ನಮ್ಮ ಜೀವನದ ಹಾಗೂ ಸಮಾಜದಲ್ಲೆದುರಾದ ಸಮಸ್ಯೆಗಳು ನೆನಪಿಲ್ಲ' ಎಂದಿದ್ದಾರೆ. ಕೆಲ ತಿಂಗಳ ಹಿಂದೆ ಇಬ್ಬರೂ ತಮ್ಮ ಪರಿವಾರದೊಂದಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಜ್'ಪತಾ 'ಈಗ ನಮ್ಮ ಕುಟುಂಬ ಪೂರ್ಣವಾಗಿದೆ, ಜೀವನದ ಅಂತಿಮ ಹಂತದಲ್ಲಿದ್ದೇವೆ ಹೀಗಿರುವಾಗ ನಾವ್ಯಾಕೆ ಮದುವೆಯಾಘಿ ನಮ್ಮ ಪ್ರೀತಿಯನ್ನು ಸಮಾಜದೆದುರು ತೆರೆದಿಡಬಾರದು ಎಂದು ತಮ್ಮ ಮನದ ಮಾತನ್ನು' ತಿಳಿಸಿದ್ದಾರೆ. ಇದನ್ನು ಆಲಿಸಿದ ಮಕ್ಕಳು ತಾಯಿಯ ಇಚ್ಛೆಯನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದಾರೆ. ಮಕ್ಕಳೆಲ್ಲಾ ಸೇರಿ ತಂದೆ ಸುಕುಮಾರ್'ನನ್ನು ಜೀವನದ ಈ ಹಂತದಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಸಿ, ಅದ್ಧೂರಿಯಾಗಿ ತಂದೆ ತಾಯಿಗೆ ಮದುವೆ ಮಾಡಿಸಿದ್ದಾರೆ. ಈ ಮದುವೆಯಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರೂ ಪಾಲ್ಗೊಂಡಿದ್ದರು.
ಇನ್ನು ಇವರಿಬ್ಬರ ಕುರಿತಾಗಿ ಮಾತನಾಡಿದ ಗ್ರಾಮಸ್ಥರು 'ಇಬ್ಬರೂ ನಿಜವಾದ ಪ್ರೇಮಿಗಳು. ಇವರು ಜೀವನ ನಡೆಸಿದ ರೀತಿ ನೋಡಿದರೆ ಇವರಿಬ್ಬರಿಗೆ ಮದುವೆಯಾಗಿಲ್ಲ ಎಂಬುವುದು ಗೊತ್ತೇ ಆಗುತ್ತಿರಲಿಲ್ಲ. ನಿಜಕ್ಕೂ ಇವರ ಪ್ರೀತಿ ಎಲ್ಲಾ ಪ್ರೇಮಿಗಳಿಗೆ ಆದರ್ಶವಾಗಿದೆ' ಎಂದಿದ್ದಾರೆ.

click me!