
ಲಕ್ನೋ : ಉತ್ತರ ಪ್ರದೇಶ ಲಕೀಮ್ ಪುರ ಜಿಲ್ಲೆಯ ಪೊಲೀಸ್ ಅಧಿಕಾರಿಯೋರ್ವರು ಬಿಜೆಪಿ ಸಂಸದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಸದೆ ರೇಖಾ ವರ್ಮ ಅವರ ಬೆಂಗಾವಲು ಪಡೆಯಲ್ಲಿ ಇದ್ದ ವೇಳೆ ತಮಗೆ ಥಳಿಸಿ, ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮೊಹಮದಿ ಕೋಟ್ವಾಲಿ ಪೊಲೀಸ್ ಠಾಣೆಯ ಪೇದೆ ಶಾಮ್ ಸಿಂಗ್ ದೂರು ನೀಡಿದ್ದಾರೆ.
ಶಾಮ್ ಸಿಂಗ್ ಅವರು ಸಂಸದೆಗೆ ಬೆಂಗಾವಲಾಗಿದ್ದ ಕಾರಿನಲ್ಲಿದ್ದರು. ಈ ವೇಳೆ ಸಿಟ್ಟಾಗಿ ನಿನ್ನ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಥಳಿಸಿದ್ದಾರೆ. ಸಾರ್ವಜನಿಕವಾಗಿ ಈ ರೀತಿ ಥಳಿಸಿರುವುದು ತಮಗೆ ಅವಮಾನವನ್ನುಂಟು ಮಾಡಿದೆ ಎಂದಿದ್ದಾರೆ.
ಕಾರಣವಿಲ್ಲದೇ ತಮ್ಮನ್ನು ಥಳಿಸಿದ್ದು, ಸಮವಸ್ತ್ರದಲ್ಲಿದ್ದ ವೇಳೆಯೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ತಾವು ದೂರು ದಾಖಲಿಸಿದ್ದು, ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.
ಪೊಲೀಸ್ ಪೇದೆ ಶಾಮ್ ಸಿಂಗ್ ದೂರಿನ ಆಧಾರದಲ್ಲಿ ಸಂಸದೆ ರೇಖಾ ವರ್ಮ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.