ಇದು ಕೋಲ್ಡ್ ವಾರ್ 2: ರಷ್ಯಾ-ಅಮೆರಿಕ ಪರಮಾಣು ಒಪ್ಪಂದ ಖತಂ!

By Web DeskFirst Published Oct 21, 2018, 12:06 PM IST
Highlights

ಮತ್ತೆ ಶೀತಲ ಸಮರ ಪ್ರಾರಂಭದ ಕಾರ್ಮೋಡ! ರಷ್ಯಾ ಜೊತೆಗಿನ ಪರಮಾಣು ಒಪ್ಪಂದದಿಂದ ಹೊರಬಂದ ಅಮೆರಿಕ! ಶೀತಲ ಸಮರದ ಸಮಯದಲ್ಲಿ ಜಾರಿಗೆ ಬಂದಿದ್ದ ಒಪ್ಪಂದ! ರಷ್ಯಾದ ವಿರುದ್ಧ ಒಪ್ಪಂದ ಉಲ್ಲಂಘನೆಯ ಆರೋಪ!   

ವಾಷಿಂಗ್ಟನ್(ಅ.21): ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ಪಡೆ(ಐಎನ್ಎಫ್) ಒಪ್ಪಂದದಿಂದ ಅಮೆರಿಕ ಹೊರಬರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ರಷ್ಯಾ ಒಪ್ಪಂದವನ್ನು ಮುರಿದಿದೆ ಎಂದು ಅಮೆರಿಕಾ ಆರೋಪಿಸಿದೆ.

ನಾವು ಒಪ್ಪಂದವನ್ನು ಇಲ್ಲಿಗೇ ಮುರಿಯಲಿದ್ದು ಇದರಿಂದ ಹೊರಬರಲಿದ್ದೇವೆ, ಅದನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್ ನಿನ್ನೆ ನೆವಾಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅಮೆರಿಕಾ-ರಷ್ಯಾ ನಡುವಿನ ಮೂರು ದಶಕಗಳ ಒಪ್ಪಂದ ಇದಾಗಿದೆ. ನಾವು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದರು.

1987ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಡುವೆ ನಡೆದ ಒಪ್ಪಂದ ಇದಾಗಿತ್ತು. ಸಣ್ಣ-ವ್ಯಾಪ್ತಿಯ ಮತ್ತು ಮಧ್ಯಂತರ-ಶ್ರೇಣಿಯ ವ್ಯಾಪ್ತಿಯ ಪರಮಾಣು ಅಣ್ವಸ್ತ್ರ ಉಡಾವಣಾ ಸಾಧನಗಳ ಹೊರ ಹಾಕುವಿಕೆಯ ಒಪ್ಪಂದ ಇದಾಗಿತ್ತು.

ಈ ಹಳೆ ಒಪ್ಪಂದವನ್ನು ಮುರಿದಿದ್ದು ಹೊಸ ಒಪ್ಪಂದವನ್ನು ಚೀನಾ ಮತ್ತು ರಷ್ಯಾ ಒಪ್ಪಿಕೊಳ್ಳದಿದ್ದರೆ ನಾವೇ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

click me!