
ಬೆಂಗಳೂರು : ಕನ್ನಡ ಚಿತ್ರರಂಗದಲ್ಲೂ ಚುರುಕುಗೊಂಡ ಮೀ ಟೂ ಅಭಿಯಾನ ಈಗ ನಟ ಅರ್ಜುನ್ ಸರ್ಜಾ ಅವರ ಕೊರಳಿಗೆ ಸುತ್ತಿಕೊಂಡಿದೆ. ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಮೇಲೆ ಖ್ಯಾತ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಇದೀಗ ಮೀ ಟೂ ಆರೋಪ ಮಾಡಿದ ಶ್ರುತಿಗೆ ನಟ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದಾರೆ. ಶ್ರುತಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ಹಾಗೂ ದಿಟ್ಟ ಹೆಣ್ಣು ಎಂದು ಬಣ್ಣಿಸಿದ್ದಾರೆ.
"
ಅರ್ಜುನ್ ಸರ್ಜಾ ಕನ್ನಡದ ಹೆಮ್ಮೆ ಎಂಬುದನ್ನು ಮರೆಯದಿರೋಣ. ಆದರೆ ಶ್ರುತಿ ಅನುಭವಿಸಿದ ಅಸಹಾಯಕತೆ ಹಾಗೂ ಅವಮಾನವನ್ನೂ ಅರ್ಥ ಮಾಡಿಕೊಳ್ಳಬೇಕು. ಆ ಹೆಣ್ಣಿನ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ರೈ ಹೇಳಿದ್ದಾರೆ.
ಅಲ್ಲದೇ ನಟ ಅರ್ಜುನ್ ಸರ್ಜಾ ಅವರು ಈ ಆರೋಪವನ್ನು ಅಲ್ಲಗಳೆದರೂ ಕೂಡ ಕ್ಷಮೆ ಕೇಳಬೇಕು. ನೋವಿಗಾಗಿ, ವರ್ತನೆಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ. ಗಂಡಸರು ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದು ನಿಜ. ನಾನು ಶ್ರುತಿ ಹರಿಹರನ್ ಹಾಗೂ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರ ನಿಲ್ಲುತ್ತೇನೆ. ಅರ್ಜುನ್ ಸರ್ಜಾ ಇದಕ್ಕೆ ಕ್ಷಮೆ ಕೇಳಬೇಕು ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.