ಬೆಂಗಳೂರಲ್ಲಿ ಶೇ.30 ಹಿರಿಯ ನಾಗರಿಕರಿಗೆ ಕಿರುಕುಳ!

Published : Jun 14, 2017, 06:36 PM ISTUpdated : Apr 11, 2018, 12:48 PM IST
ಬೆಂಗಳೂರಲ್ಲಿ ಶೇ.30 ಹಿರಿಯ ನಾಗರಿಕರಿಗೆ ಕಿರುಕುಳ!

ಸಾರಾಂಶ

ದೇಶದಲ್ಲೇ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ 2002ರಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಪ್ರಾರಂಭಿಸಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಮತ್ತು ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ ಸಂಸ್ಥೆ ಸಹಯೋಗದಲ್ಲಿ ಇದೇ ಏಪ್ರಿಲ್‌ 24ರಿಂದ ಹಿರಿಯರ ಸಹಾಯವಾಣಿ ಅವಧಿಯನ್ನು ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ 24 ಗಂಟೆಗಳಿಗೆ ವಿಸ್ತರಿಸಲಾಗಿದೆ. ಪ್ರತಿನಿತ್ಯ 60ರಿಂದ 70ಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಇವುಗಳಲ್ಲಿ 10ರಿಂದ 15 ಕರೆಗಳು ದೌರ್ಜನ್ಯಕ್ಕೆ ಸಂಬಂಧಿಸಿವೆ.

ಬೆಂಗಳೂರು: ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದ್ದು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಮಾನಸಿಕ ಹಾಗೂ ದೈಹಿಕ ಕಿರುಕುಳ ಸೇರಿದಂತೆ ಒಂದಲ್ಲಾ ಒಂದು ತೊಂದರೆಗಳಿಂದ ಜರ್ಝರಿತವಾಗುತ್ತಿದ್ದಾರೆ.

ಆಸ್ತಿ ವಿಚಾರ, ಮಕ್ಕಳು-ಸೊಸೆಯರೊಂದಿಗೆ ಹೊಂದಾಣಿಕೆ ಅಭಾವ, ಮಕ್ಕಳ ನಿರ್ಲಕ್ಷ್ಯ, ಮಾನ ಹಾನಿ, ಆರ್ಥಿಕ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳು ಸೇರಿದಂತೆ ವಿವಿಧ ಪ್ರಕರಣಗಳ ದೂರುಗಳು ಹಿರಿಯರ ಸಹಾಯವಾಣಿಯಲ್ಲಿ ದಾಖಲಾಗುತ್ತಿವೆ. ಬಹುತೇಕ ದೂರುಗಳು ದೌರ್ಜನ್ಯ, ಕಿರುಕುಳ, ಚೆಕ್‌'ಬೌನ್ಸ್‌, ಆಸ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಮೋಸ ಹೋದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಸುಮಾರು 10 ಲಕ್ಷ ಹಿರಿಯ ನಾಗರಿಕರಿದ್ದು, ಇವರಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ರೀತಿ ಹಿರಿಯ ನಾಗರಿಕರ ಮೇಲಿನ ಅಪರಾಧಗಳ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

ಸಹಾಯವಾಣಿಗೆ ಕರೆ: ದೇಶದಲ್ಲೇ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ 2002ರಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಪ್ರಾರಂಭಿಸಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಮತ್ತು ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ ಸಂಸ್ಥೆ ಸಹಯೋಗದಲ್ಲಿ ಇದೇ ಏಪ್ರಿಲ್‌ 24ರಿಂದ ಹಿರಿಯರ ಸಹಾಯವಾಣಿ ಅವಧಿಯನ್ನು ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ 24 ಗಂಟೆಗಳಿಗೆ ವಿಸ್ತರಿಸಲಾಗಿದೆ. ಪ್ರತಿನಿತ್ಯ 60ರಿಂದ 70ಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಇವುಗಳಲ್ಲಿ 10ರಿಂದ 15 ಕರೆಗಳು ದೌರ್ಜನ್ಯಕ್ಕೆ ಸಂಬಂಧಿಸಿವೆ.

15 ವರ್ಷಗಳಲ್ಲಿ ಸರಿಸುಮಾರು 1.60ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದು, 8662 ಗಂಭೀರವಾದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ.52 ದೂರುಗಳನ್ನು ಸಹಾಯವಾಣಿಯ ಆಪ್ತ ಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರು, ನುರಿತ ವಕೀಲರು ಮತ್ತು ಪೊಲೀಸ್‌ ಇಲಾಖೆ ಸಹಾಯದೊಂದಿಗೆ ಇತ್ಯರ್ಥಪಡಿಸಲಾಗಿದೆ. 2016ರ ಜನವರಿಯಿಂದ 2017ರ ಮಾರ್ಚ್ ತಿಂಗಳವರೆಗೆ 21,102 ಕರೆಗಳು ಬಂದಿದ್ದು, 464 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 274 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 108 ಅನ್ನು ಖುಲಾಸೆಗೊಳಿಸಲಾಗಿದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಆಸ್ತಿ, ಹಣ ಕೂಡಿಡುವುದು ಹಿರಿಯ ನಾಗರಿಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. ದೈಹಿಕವಾಗಿ ಸದೃಢರಾಗಿ ರುವವರೆಗೂ ತಂದೆ- ತಾಯಿಯ ಪ್ರಯೋಜನ ಪಡೆದುಕೊಳ್ಳುವ ಮಕ್ಕಳು, ಅಂತಿಮ ಕಾಲದಲ್ಲಿ ಅವ ರನ್ನು ನಿರ್ಲಕ್ಷಿಸುತ್ತಿದ್ದಾರೆ. ಕೆಲಸದಿಂದ ನಿವೃತ್ತರಾದ ನಂತರ ವೈದ್ಯಕೀಯ ವೆಚ್ಚಕ್ಕಾಗಿ ಪರದಾಡುವ ಪರಿ ಸ್ಥಿತಿ ಹಿರಿ ಜೀವಗಳದ್ದಾಗಿದೆ. ಸಹಾಯವಾಣಿಗೆ ಬರುತ್ತಿರುವ ಕರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವುದೇ ಆಗಿದೆ. ಪ್ರತಿನಿತ್ಯ ನಿಂದನೆ, ಕಿರುಕುಳಗಳನ್ನು ಅನುಭವಿಸುತ್ತಿ ರುವುದು ಕಂಡುಬರುತ್ತಿವೆ ಎಂದು ಸಂಸ್ಥೆಯ ಯೋಜನಾ ಉಸ್ತುವಾರಿ ಸ್ವಾತಿ ತಿಳಿಸುತ್ತಾರೆ.

ಹಿರಿಯ ನಾಗರಿಕರಿಗೆ ಸೇವೆಗಳು ಉಚಿತ:
ಹಲವು ಸಂಕೀರ್ಣ ಸಂದರ್ಭಗಳಲ್ಲಿ ನೆರೆಹೊರೆಯವರ ಸಹಾಯವೂ ಸಿಗದಿದ್ದಾಗ ಹಿರಿಯ ನಾಗರಿಕರು ಸಹಾಯವಾಣಿ ಸೇವೆಗೆ ಕರೆ ಮಾಡಿ ಯಾವುದೇ ಕ್ಷಣದಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು. 
ಈ ಹಿರಿಯರ ಸಹಾಯವಾಣಿಯಲ್ಲಿ ನೀಡಲಾಗುವ ಎಲ್ಲ ಸೇವೆಗಳು ಉಚಿತವಾಗಿದ್ದು, ದೂರವಾಣಿ ಸಂಖ್ಯೆ 1090(ದರ ರಹಿತ ಕರೆ) ಹಾಗೂ 080-22943226 ಅಥವಾ ವೆಬ್‌ಸೈಟ್‌ ಡಿಡಿಡಿ.್ಞಜಿಜhಠಿಜ್ಞಿಜa್ಝಛಿsಛ್ಝಿdಛ್ಟ್ಚಿa್ಟಛಿ.್ಚಟಞ ರಲ್ಲಿ ಸಿಬ್ಬಂದಿ ಸಂಪರ್ಕಿಸಬಹುದು. ಅಲ್ಲದೇ ಹೊಸದಾಗಿ ಆರಂಭವಾದ ‘ನಮ್ಮ 100'ಕ್ಕೂ ಕರೆ ಮಾಡಬಹುದು.

ನಿಂದನೆ, ದೌರ್ಜನ್ಯ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಅದರೊಂದಿಗೆ ಜನಜಾಗೃತಿಯೂ ಹೆಚ್ಚುತ್ತಿವೆ. ಈ ಹಿಂದೆ ನಾವು ದೂರು ನೀಡಿದರೆ ಕುಟುಂಬದ ಮರ್ಯಾದೆ ಬೀದಿಗೆ ಬರುತ್ತದೆ ಎಂದು ಅಂಜುತ್ತಿದ್ದವರು ಧೈರ್ಯದಿಂದ ದೂರು ದಾಖಲಿಸುತ್ತಿದ್ದಾರೆ. ಮಕ್ಕಳಿಂದ ನಿರ್ಲಕ್ಷಿತರಾದವರಿಗೆ ಆರ್ಥಿಕ ಸಹಾಯದೊಂದಿಗೆ ಭಾವನಾತ್ಮಕ ಸಂಬಂಧ ಕಲ್ಪಿಸಬೇಕಿದೆ.
- ಡಾ. ರಾಧಾ, ನೈಟಿಂಗೇಲ್ಸ್‌ ಸಂಸ್ಥೆ

ವರದಿ: ಕಾವೇರಿ ಎಸ್.ಎಸ್., ಕನ್ನಡಪ್ರಭ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!