ಆರ್‌ಬಿಐ ವಾಟ್ಸಪ್ ಗ್ರೂಪ್‌ಗೆ ಈಗಲೂ ಪಟೇಲ್ ಅಡ್ಮಿನ್!

By Web DeskFirst Published Dec 15, 2018, 11:57 AM IST
Highlights

ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜಿನಾಮೆ | ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ | ಆರ್‌ಬಿಐನ ವಾಟ್ಸಪ್ ಗ್ರೂಪ್‌ಗೆ ಊರ್ಜಿತ್ ಪಟೇಲ್ ಅವರೇ ಅಡ್ಮಿನ್? 

ಬೆಂಗಳೂರು (ಡಿ. 15): ಊರ್ಜಿತ್ ಪಟೇಲ್ ಅವರ ಹಠಾತ್ ರಾಜೀನಾಮೆಯಿಂದ ತೆರವಾದ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ. 

ಮೋದಿಗೆ ಮತ್ತೆ ಬೈದ ಸ್ವಾಮಿ: ಇವರಾ ನಿಮ್ಮ ಆರ್‌ಬಿಐ ಗರ್ವನರ್?

ಆದರೆ, ಕೇಂದ್ರ ಹಣಕಾಸು ವ್ಯವಹಾರಗಳ ಮಾಜಿ ಕಾರ್ಯದರ್ಶಿಯಾದ ದಾಸ್ ನೇಮಕದ ಸಂಬಂಧ ಹಾಗೂ ಊರ್ಜಿತ್ ಪಟೇಲ್ ಅವರ ರಾಜೀನಾಮೆಯನ್ನು ಒಮ್ಮೆಲೇ ಸಮ್ಮತಿಸಿದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮೌನ ಮುರಿದಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಊರ್ಜಿತ್ ಪಟೇಲ್ ಅವರು ಆರ್‌ಬಿಐ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು.

24 ಗಂಟೆಗಳಲ್ಲೇ ನೂತನ ಆರ್‌ಬಿಐ ಗವರ್ನರ್ ನೇಮಿಸಿದ ಕೇಂದ್ರ ಸರ್ಕಾರ..!

ಆದರೆ, ‘ಆರ್‌ಬಿಐನ ವಾಟ್ಸಪ್ ಗ್ರೂಪ್‌ಗೆ ಪಟೇಲ್ ಅವರೇ ಅಡ್ಮಿನ್ ಆಗಿದ್ದು, ಅಲ್ಲಿಂದಲೇ ಅವರು ಆರ್‌ಬಿಐ ಗವರ್ನರ್ ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ’ ಎಂದು ಜೇಟ್ಲಿ ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

click me!