
ಬೆಂಗಳೂರು(ಆ.12): ನಟ ಉಪೇಂದ್ರ ರಾಜಕೀಯಕ್ಕೆ ಬರ್ತಾರೆ ಎಂಬ ಗುಮಾನಿಗೆ ಈಗ ಸ್ವತಃ ಉಪೇಂದ್ರ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ರುಪ್ಪೀಸ್ ರೆಸಾರ್ಟ್'ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಉಪೇಂದ್ರ ತಮ್ಮದೇ ಪಕ್ಷವನನ್ನು ಸ್ಥಾಪಿಸುವ ಮುನ್ಸೂಚನೆ ನೀಡಿದ್ದಾರೆ.
ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಕುರಿತ ಸುದ್ದಿಗೋಷ್ಟಿಗೆ ಇಂದು ತೆರೆ ಬಿದ್ದಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪ್ಪಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನ ಸಾಮಾನ್ಯರಲ್ಲ, ಜನರು ಅಸಾಮಾನ್ಯರು. ಜಾತಿ ಹಾಗೂ ಹಣ ಬಲದಿಂದ ರಾಜಕೀಯ ಮಾಡಬಾರದು. ಇದನ್ನು ಹೊರತುಪಡಿಸಿ ಒಂದು ಪ್ರಯೋಗಕ್ಕೆ ಕೈ ಹಾಕಲು ಹೊರಟಿದ್ದೇನೆ. ನನ್ನ ಜೊತೆ ನೀವೂ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.
ಅಲ್ಲದೆ ತಮ್ಮ ಪಕ್ಷ ಹೇಗಿರುತ್ತದೆ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ? ಪಕ್ಷದ ಕಾರ್ಯಕರ್ತರು ಹೇಗಿರಬೇಕು? ಈ ಪಕ್ಷ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತಾಗಿಯೂ ತಿಳಿಸಿದ್ದಾರೆ. ಇನ್ನು ಈ ಕುರಿತಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು ಅದಕ್ಕಾಗಿ, ಮೂರು ಇ ಮೇಲ್ ಐಡಿಗಳನ್ನ ನೀಡಿದ್ದಾರೆ( prajakarana1@gmail.com, prajakarana2@gmail.com, Prajakarana3@gmail.com ) ಜೊತೆಗೆ ಪಕ್ಷ ಸ್ಥಾಪನೆಗೆ ಸಲಹೆ ಸೂಚನೆ ನೀಡೋರು ರುಪ್ಪೀಸ್ ರೆಸಾರ್ಟ್ ವಿಳಾಸಕ್ಕೆ ಪತ್ರವನ್ನೂ ಬರೆಯಬಹುದು ಅಂತಾ ಹೇಳಿದ್ದಾರೆ.
ಸುದ್ದಿಗೋಷ್ಠಿಗೆ ಖಾಕಿ ಉಡುಪಿನಲ್ಲೇ ಬಂದ ಉಪೇಂದ್ರ ಖಾಕಿ ಕಾರ್ಮಿಕರ ಸಂಕೇತ. ನಾನು ರಾಜಕೀಯದಲ್ಲಿ ಸಂಬಳಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.