
ಬೆಂಗಳೂರು (ಡಿ.24): ಉಪೇಂದ್ರ ನೇತೃತ್ವದ ಪಕ್ಷವಾದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಪ್ರಣಾಳಿಕೆ ಇಂದು ಬಿಡುಗಡೆಯಾಗಿದೆ. ಪೂರ್ಣ ಪಾರದರ್ಶಕ ಆಡಳಿತದ ಆಶ್ವಾಸನೆ ಜತೆ 24 ಅಂಶಗಳನ್ನು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಕೆಪಿಜೆಪಿ ಪ್ರಣಾಳಿಕೆಯ ಪ್ರಮುಖಾಂಶ ಹೀಗಿದೆ:
1. ಪ್ರಜೆಗಳನ್ನು ಸೇರಿಸಿಕೊಂಡು ಪೂರ್ಣ ಪಾರದರ್ಶಕ ಆಡಳಿತ
2. ಪ್ರಜಾ ಸಂಪರ್ಕಕ್ಕೆ ಟಿವಿ, ಸಾಮಾಜಿತ ಜಾಲತಾಣದ ಬಳಕೆ
3. ಮೊಬೈಲ್ ಅಪ್ಲಿಕೇಷನ್ಸ್ ಮೂಲಕ ದೂರು ಪರಿಹಾರ ವ್ಯವಸ್ಥೆ
4. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಂಕಗಳೇ ಮಾನದಂಡ
5.ಕಡಿಮೆ ಅಂಕಗಳಿಸಿದವರಿಗೆ ಶಿಸ್ತುಕ್ರಮ ಮತ್ತು ವೇತನ ಕಡಿತ
6.ಪ್ರತಿ ಇಲಾಖೆಯ ನೌಕರರನ್ನು ಗುರುತಿಗೆ ಶಿಸ್ತಿನ ಸಮವಸ್ತ್ರ
7.ಸರ್ಕಾರಿ ನೌಕರರ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ
8.ವಿಧಾನಸೌಧದ ಕಾರ್ಯ ಚಟುವಟಿಕೆ ಪರದೆ ಮೇಲೆ ಪ್ರಸಾರ
9.ಮಾಧ್ಯಮಗಳಲ್ಲಿ ಎಲ್ಲ ಜನಪ್ರತಿನಿಧಿಗಳು ನೇರಚರ್ಚೆ ವ್ಯವಸ್ಥೆ
10.ಆನ್ ಲೈನ್ ಮೂಲಕ ಸರ್ಕಾರದ ಗುತ್ತಿಗೆ ಟಿವಿಯಲ್ಲಿ ಪ್ರಸಾರ
11.ಗುತ್ತಿಗೆದಾರರಿಗೆ ಹಣ ಪಾವತಿಯ ಪ್ರಕ್ರಿಯೆ ಟಿವಿಯಲ್ಲಿ ಪ್ರಸಾರ
12.ಪ್ರತಿ ಕಾಮಗಾರಿಯ ಪ್ರತಿ ಹಂತವೂ ಟಿವಿಗಳಲ್ಲಿಯೇ ಪ್ರಸಾರ
13.ಜನಪ್ರತಿನಿಧಿ, ನೌಕರರ ಕಾರ್ಯ ಟಿವಿಯಲ್ಲಿ ಮೊದಲೇ ಪ್ರಕಟ
14.ತಿಂಗಳಿಗೊಮ್ಮೆ ಪ್ರಜೆಗಳು, ಜನಪ್ರತಿನಿಧಿ, ನೌಕರರ ಸಂವಾದ
15.ಸಿಎಂ, ಸಚಿವರಿಂದ ಆಗಾಗ ಪರಿಶೀಲನೆ ಮತ್ತು ನೇರ ಪ್ರಸಾರ
16.ಟಿವಿಯಲ್ಲಿ ಪ್ರಸಾರದ ಮಾಡಿ ಕಾರಣ ಕೊಟ್ಟು ನೌಕರರ ವರ್ಗಾ
17.ಸರ್ಕಾರಿ ನೇಮಕಾತಿಗಳ ಪ್ರಕ್ರಿಯೆಗಳು TVಯಲ್ಲಿ ನೇರ ಪ್ರಸಾರ
18.ತಿಂಗಳಿಗೊಮ್ಮೆ ತೆರಿಗೆ ಸಂಗ್ರಹ, ಆದಾಯ ದಾಖಲೆ ಮಾಹಿತಿ
19.ಮಾಹಿತಿ ಕೊಟ್ಟರೆ ಮಾತ್ರ ಜನಪ್ರತಿನಿಧಿಗೆ ವೇತನ, ಇತರೇ ವೆಚ್ಚ
20.ಮಾಜಿ ಜನಪ್ರತಿನಿಧಿ, ನೌಕರರು ಪಿಂಚಣಿ ತಿರಸ್ಕಾರ ಅವಕಾಶ
21.ಸಿಗುವ ಪಿಂಚಣಿ ಹಣದಿಂದ ವೃದ್ಧಾಶ್ರಮ, ವಸತಿರಹಿತರ ವಿಕಾಸ
22.ಯಾವುದೇ ಯೋಜನೆ ಚಾಲನೆ ನೀಡದೇ ಪ್ರಜಾಬಳಕೆಗೆ ವ್ಯವಸ್ಥೆ
23.ಶಾಸಕಾಂಗ ವೇತನ, ಪಿಂಚಣಿ & ಭತ್ಯೆ ಕಾಯ್ದೆ 1952 ತಿದ್ದುಪಡಿ
24.ಪ್ರಣಾಳಿಕೆ ಎಲ್ಲಾ ಭರವಸೆಗಳ ಜಾರಿಗೆ ಅಗತ್ಯ ಕಾನೂನು ಜಾರಿ
ಇದು ಪ್ರಣಾಳಿಕೆಯ ಮೊದಲನೆ ಭಾಗವಾಗಿದ್ದು ಇದರ ಬಗ್ಗೆ ಜನರ ಅನಿಸಿಕೆಯನ್ನು ಪರಿಗಣಿಸಿ ಜನರ ಸಲಹೆಗಳ ಆಧಾರದ ಮೇಲೆ ಶೀಘ್ರವೇ ಅಂತಿಮ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.