500 ರು.ಕೊಟ್ಟು ಮತದಾನಕ್ಕೂ ಮುನ್ನ ಬೆರಳಿಗೆ ಶಾಯಿ ಹಚ್ಚಿದ್ರು

By Web DeskFirst Published May 20, 2019, 10:31 AM IST
Highlights

500 ರು.ಕೊಟ್ಟು ಮತದಾನಕ್ಕೂ ಮುನ್ನ ಬೆರಳಿಗೆ ಶಾಯಿ ಹಚ್ಚಿದ್ರು| ದುಡ್ಡು ಕೊಟ್ಟು, ಪಕ್ಷಗಳ ಕಾರ್ಯಕರ್ತರೇ ಕೈ ಬೆರಳಿಗೆ ಶಾಯಿ

ಚಾಂದೌಲಿ[ಮೇ.20]:: ಚುನಾವಣೆ ವೇಳೆ ಯಾರದ್ದೋ ಮತವನ್ನು ಇನ್ಯಾರೋ ಅಕ್ರಮವಾಗಿ ಹಾಕುವುದು, ಇಲ್ಲವೇ ಹಣ ಕೊಟ್ಟು ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಮತದಾರರನ್ನು ಬುಕ್‌ ಮಾಡುವುದು ಸಾಮಾನ್ಯ. ಆದರೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಜನರಿಗೆ ದುಡ್ಡು ಕೊಟ್ಟು, ಪಕ್ಷಗಳ ಕಾರ್ಯಕರ್ತರೇ ಕೈ ಬೆರಳಿಗೆ ಶಾಯಿ ಹಚ್ಚಿ ಕಳುಹಿಸಿದ ಆರೋಪ ಕೇಳಿಬಂದಿದೆ.

ಚಾಂದೌಲಿ ಲೋಕಸಭಾ ಕ್ಷೇತ್ರದ ತಾರಾ ಜೀವನ್‌ಪುರ ಎಂಬ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ತಮಗೆ 500 ರು. ಹಣ ನೀಡಿ, ಬಳಿಕ ಕೈಬೆರಳಿಗೆ ಶಾಯಿ ಹಚ್ಚುವ ಮೂಲಕ ಮತದಾನ ಮಾಡದಂತೆ ತಡೆದಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವಿಷಯ ಹರಡುತ್ತಿದ್ದಂತೆ. ಎಸ್ಪಿ-ಬಿಎಸ್ಪಿ ಕಾರ್ಯಕರ್ತರು, ಗ್ರಾಮಸ್ಥರೊಂದಿಗೆ ಸ್ಥಳೀಯ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿ ನಡುವೆ ಹಣಾಹಣಿ ಏರ್ಪಟ್ಟಿದೆ.

ಆದರೆ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದ್ದು, ನಮ್ಮ ಹೆಸರು ಕೆಡಿಸಲು ಎಸ್ಪಿ-ಬಿಎಸ್ಪಿ ಈ ರೀತಿ ಮಾಡುತ್ತಿದೆ ಎಂದು ದೂರಿದ್ದಾರೆ. ಧರಣಿ ನಿರತರನ್ನು ಭೇಟಿ ಮಾಡಿದ ಎಸಿ ಹಾಗೂ ಸಹಾಯಕ ಚುನಾವಣಾಧಿಕಾರಿ ಕುಮಾರ್‌ ಹರ್ಷ ಸಮಗ್ರ ವಿಚಾರಣೆ, ತಪ್ಪಿತಸ್ಥರ ಮೇಲೆ ಕ್ರಮದ ಭರವಸೆ ನೀಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!