ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

Published : Oct 03, 2018, 01:10 PM ISTUpdated : Oct 03, 2018, 01:13 PM IST
ಲೋಕಸಭಾ ಚುನಾವಣೆ:  ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

ಸಾರಾಂಶ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣಾ ಕಸರತ್ತುಗಳು ಶುರುವಾಗಿವೆ | ಅಯೋಧ್ಯಾ ತೀರ್ಪಿಗಾಗಿ ಕಾಯುತ್ತಿದೆ ಬಿಜೆಪಿ | ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಗೆಲ್ಲಬೇಕಾದರೆ ಮಂದಿರ ಅನಿವಾರ್ಯ ಎಂದು ಬಿಜೆಪಿಯ ಆಂತರಿಕ ಸರ್ವೇಗಳು ಹೇಳುತ್ತಿವೆಯಂತೆ.

ನವದೆಹಲಿ (ಅ. 03): ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ವಿಚಾರಣೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಲೋಕಸಭಾ ಚುನಾವಣೆ ಒಳಗೆ ತೀರ್ಪು ಬಂದರೆ ಹಿಂದಿ ರಾಜ್ಯಗಳಲ್ಲಿ ಬಂಪರ್ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.

ಆದರೆ ಹೊಸ ದಾಗಿ ಮುಖ್ಯ ನ್ಯಾಯಮೂರ್ತಿ ಆಗಲಿರುವ ನ್ಯಾಯಮೂರ್ತಿ ರಂಜನ್ ಗೊಗೋಯ್ ಲೋಕಸಭಾ ಚುನಾವಣೆ ನಂತರ ನಿವೃತ್ತಿ ಆಗಲಿದ್ದು, ಒಂದು ವೇಳೆ ನ್ಯಾಯಮೂರ್ತಿ ಗೊಗೋಯ್ ಪೀಠದ ಎದುರು ಅಯೋಧ್ಯೆ ವಿಚಾರಣೆ ನಡೆದು ಅವರು ನಿವೃತ್ತಿ ಆಗುವ ಸಮಯದಲ್ಲಿ ತೀರ್ಪು ನೀಡಿದರೆ ಬಿಜೆಪಿ ತನಗೆ ಸಿಗಬಹುದಾದ ಆಮ್ಲಜನಕದಿಂದ ವಂಚಿತ ಆಗುವುದು ನಿಶ್ಚಿತ.

ಬರೀ ಮೋದಿ ನಾಮ ಬಲ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಇರುವ ಬಿಜೆಪಿಗೆ ಅಯೋಧ್ಯೆ ತೀರ್ಪಿನ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ. ಆರ್‌ಎಸ್‌ಎಸ್ ಅಂತೂ ೨೦೧೯ರ ಚುನಾವಣೆಯಲ್ಲಿ ನೇರವಾಗಿ ರಾಮ ಮಂದಿರ ವಿಷಯವನ್ನು ಪ್ರಸ್ತಾಪಿಸಿ ಎಂದು ಪ್ರಧಾನಿಗೆ ಸಲಹೆ ನೀಡಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಬರಲಿ ಎಂದು ಪ್ರಧಾನಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಗೆಲ್ಲಬೇಕಾದರೆ ಮಂದಿರ ಅನಿವಾರ್ಯ ಎಂದು ಬಿಜೆಪಿಯ ಆಂತರಿಕ ಸರ್ವೇಗಳು ಹೇಳುತ್ತಿವೆಯಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ 

ರಾಜಕಾರಣಧ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ