
ಭಾರೀ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ಉಪಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಎರಡೂ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆ ಇರೋದು ಗೋಚರವಾಗಿದ್ದು. ಮತದಾರರು ಆಡಳಿತ ಸುಧಾರಣೆಯ ಸಂದೇಶ ರವಾನಿಸಿದ್ದಾರೆ.
ಎಸ್ಪಿ+ಬಿಎಸ್ಪಿ ಮೈತ್ರಿಕೂಟದ ಕೊರಳಿಗೆ ವಿಜಯಮಾಲೆ
ಮಾರ್ಚ್ 11ರಂದು ನಡೆದಿದ್ದ ಉತ್ತರ ಪ್ರದೇಶದ 2 ಲೋಕಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲೂ ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ. ಸಿಎಂ ಯೋಗಿ ಆದಿತ್ಯನಾಥ್ ತವರು ಕ್ಷೇತ್ರ ಗೋರಖ್ಪುರದಲ್ಲೇ, ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನೇತೃತ್ವದ ಎಸ್ಪಿ - ಬಿಎಸ್ಪಿ ಮೈತ್ರಿಕೂಟ ವಿಜಯ ಸಾಧಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್ ನಿರಾಸೆ ಅನುಭವಿಸಿದ್ದಾರೆ. ಇನ್ನುಳಿದ ಫುಲ್ಪುರ್ ಕ್ಷೇತ್ರದಲ್ಲೂ ಸಹ ಎಸ್ಪಿ ಜಯಗಳಿಸಿದೆ.
ಉಪ ಕದನದಲ್ಲಿ ಗೆಲುವಿನ ಗೆರೆ ಬೀರಿದ ಅಖಿಲೇಶ್-ಮಾಯಾವತಿ ಜೋಡಿಗೆ ಕರ್ನಾಟಕ ಸಿಎಂ ಟ್ವೀಟ್ ಮೂಲಕ ಅಭಿನಂದಿಸೋ ಮೂಲಕ ಯೋಗಿ ಆದಿತ್ಯನಾಥ್ ಕಾಲೆಳೆದಿದ್ದಾರೆ. ಇತ್ತ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಿದ್ದೇ ಮುಳುವಾಯಿತು ಎಂದು ಯೋಗಿ ಆದಿತ್ಯನಾಥ್ ತಪ್ಪೊಪ್ಪಿಕೊಂಡಿದ್ದಾರೆ.
ಬಿಹಾರದಲ್ಲಿ ಸಿಎಂ ನಿತೀಶ್ಕುಮಾರ್ಗೆ ಮುಖಭಂಗ
ಬಿಹಾರದ ಅರಾರಿಯಾ ಲೋಕಸಭೆ ಕ್ಷೇತ್ರ ಹಾಗೂ ಜುಹಾನ್ಬಾದ್ ವಿಧಾನಸಭೆ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ರ ಆರ್ಜೆಡಿ ಪಕ್ಷ ಭರ್ಜರಿ ಜಯ ಭೇರಿ ಬಾರಿಸಿದ್ದು.ಸಿಎಂ ನಿತೀಶ್ಕುಮಾರ್ಗೆ ಭಾರೀ ಮುಖಭಂಗವಾಗಿದೆ. ಇನ್ನು ಭಬುವಾ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಒಟ್ಟಿನಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಎರಡು ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.