ಗೋವು ರಕ್ಷಿಸಲಾಗದ್ದಕ್ಕೆ ತಮ್ಮ ವಿರುದ್ಧವೇ ದೂರು ದಾಖಲಿಸಿದ ಪೊಲೀಸ್!

Published : Jul 15, 2018, 05:31 PM IST
ಗೋವು ರಕ್ಷಿಸಲಾಗದ್ದಕ್ಕೆ ತಮ್ಮ ವಿರುದ್ಧವೇ ದೂರು ದಾಖಲಿಸಿದ ಪೊಲೀಸ್!

ಸಾರಾಂಶ

ಗೋವು ರಕ್ಷಣೆಯಲ್ಲಿ ವಿಫಲ ಹಿನ್ನೆಲೆ ತಮ್ಮ ವಿರುದ್ಧವೇ ದೂರು ದಾಖಲಿಸಿದ ಅಧಿಕಾರಿ ಮಿರತ್ ನ ಮುಖ್ಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಗೋವು ರಕ್ಷಿಸುವಲ್ಲಿ ವಿಫಲವಾಗಿದ್ದಕ್ಕೆ ಸ್ವತಃ ದೂರು

ಲಕ್ನೋ(ಜು.೧೫): ಉತ್ತರಪ್ರದೇಶದ ಮಿರತ್ ನ ಮುಖ್ಯ ಠಾಣಾಧಿಕಾರಿಯಾಗಿರುವ ರಾಜೇಂದ್ರ ತ್ಯಾಗಿ, ಗೋವು ಕಳ್ಳಸಾಗಾಣೆಯನ್ನು ತಡೆಯಲು ವಿಫಲವಾಗಿದ್ದಕ್ಕೆ ತಮ್ಮನ್ನೂ ಸೇರಿದಂತೆ ಒಟ್ಟು ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜೇಂದ್ರ ತ್ಯಾಗಿ ಕಾರಾಕೋಡಾ ಠಾಣೆಯ ಉಸ್ತುವಾರಿ ತೆಗೆದುಕೊಳ್ಳುವುದಕ್ಕೂ ಮುಂಚೆಯೇ ಸ್ವತಃ ಇಂತದ್ದೊಂದು ಕಟ್ಟಳೆಯನ್ನು ಹಾಕಿಕೊಂಡಿದ್ದರು. ಅಪರಾಧವನ್ನು ತಡೆಯುವಲ್ಲಿ ತಮ್ಮನ್ನೂ ಸೇರಿಸಿದಂತೆ ಠಾಣೆಯ ಅಧಿಕಾರಿಗಳು ವಿಫಲವಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತ್ಯಾಗಿ ತಿಳಿಸಿದ್ದರು.

ಅದರಂತೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗೋವು ಕಳ್ಳಸಾಗಾಣೆಯನ್ನು ತಡೆಯುವಲ್ಲಿ ವಿಫಲರಾದ ಕಾರಣ ತಮ್ಮ ವಿರುದ್ಧವೇ ದೂರು ದಾಖಲಿಸಿದ್ದಾರೆ. ಇದುವರೆಗೂ ಈ ಠಾಣೆಯಲ್ಲಿ ಒಟ್ಟು 19 ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವುದು ವಿಶೇಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ