ಗಾಯಕನಿಗೆ ಕೊಟ್ಟ ಮುತ್ತು ಮಹಿಳೆಗೆ ತಂದಿಟ್ಟಿತು ಆಪತ್ತು! ವಿಡಿಯೋ

Published : Jul 15, 2018, 02:57 PM ISTUpdated : Jul 15, 2018, 04:05 PM IST
ಗಾಯಕನಿಗೆ ಕೊಟ್ಟ ಮುತ್ತು ಮಹಿಳೆಗೆ ತಂದಿಟ್ಟಿತು ಆಪತ್ತು! ವಿಡಿಯೋ

ಸಾರಾಂಶ

ಕಿವಿಗೆ ಇಂಪೆರೆಯುವ ಗಾಯನ ಮಾಡುತ್ತಿದ್ದ ಗಾಯಕನ ಮೇಲೆ ಆಕೆಗೆ ಮನಸ್ಸಾಯಿತು. ಹಿಂದೆ ಮುಂದೆ ನೋಡದೆ ಸೀದಾ ವೇದಿಕೆಯನ್ನೇರಿ ಗಾಯಕನನ್ನು ತಬ್ಬಿಕೊಂಡಳು,, ಮುತ್ತಿಟ್ಟಳು ಮುಂದೇನಾಯಿತು?

ರಿಯಾದ್(ಜು.15) ವೇದಿಕೆ ಮೇಲೆ ಗಾಯನ ಮಾಡುತ್ತಿದ್ದ ಹಾಡುಗಾರನನ್ನು ತಬ್ಬಿಕೊಂಡ ಮಹಿಳೆಯನ್ನು ಸೌದಿ ಅರೆಬೀಯಾ ಪೊಲೀಸರು ಬಂಧಿಸಿದ್ದಾರೆ.ಸೌದಿಯ ಪ್ರಖ್ಯಾತ ಗಾಯಕ ಮಜೀದ್ ಅಲ್-ಮೊಹಾಂದೀಸ್ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವೇದಿಕೆಗೆ ನುಗ್ಗಿದ ಮಹಿಳೆ ಅವರನ್ನು ತಬ್ಬಿಕೊಂಡಿದ್ದಾಳೆ.

ಸೌದಿಯಲ್ಲಿ ಮಹಿಳೆಯರು ಮುಕ್ತವಾಗಿ ಬೆರೆಯುವುದಕ್ಕೆ ನಿಷೇಧ ಜಾರಿಯಲ್ಲಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.

ಈ ಘಟನೆ ಬಗ್ಗೆ ಗಾಯಕ ಮಜೀದ್ ಅಲ್-ಮೊಹಾಂದೀಸ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಮಹಿಳೆ ವೇದಿಕೆಗೆ ನುಗ್ಗುತ್ತಿರುವ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ತಿಂಗಳ ಹಿಂದೆಯಷ್ಟೆ ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ಒದಗಿಸಲಾಗಿತ್ತು. ಜಗತ್ತಿನ ಎಲ್ಲ ಕಡೆಗಳಿಂದಲೂ ಸೌದಿ ಅರೇಬಿಯಾದ ಹೊಸ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!