
ಲಕ್ನೋ : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗಳಿಸಿದ್ದು ಮತ್ತೊಮ್ಮೆ ಮೋದಿ ಅಲೆ ಎಲ್ಲೆಡೆ ಹರಡಿದೆ.
ಕರ್ನಾಟಕದಂತೆ ಉತ್ತರ ಪ್ರದೇಶದಲ್ಲಿಯೂ ಕೂಡ 80 ಕ್ಷೇತ್ರಗಳ ಪೈಕಿ 62 ಸ್ಥಾನಗಳಲ್ಲಿ ಬಿಜೆಪಿ ವಿಜಯಿಯಾಗಿದ್ದು, ಈ ಜಯ ಇಲ್ಲಿನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತಂದಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನ ಗೆಲ್ಲುವಲ್ಲಿ ಮಾತ್ರವೇ ಸಫಲವಾಗಿದ್ದು, ಸೋಲಿನ ಹೊಣೆ ಹೊತ್ತ ಬಬ್ಬರ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ SP - BSP ಮೈತ್ರಿ ಹಿಂದಿಕ್ಕಿ 63 ಸ್ಥಾನ ವಶಪಡಿಸಿಕೊಂಡಿದ್ದು, ನುಂಗಲಾರದ ತುತ್ತಾಗಿದೆ. ಎಸ್ ಪಿ 5 ಸ್ಥಾನ ಪಡೆದಿದ್ದರೆ, ಬಿಎಸ್ ಪಿ 9 ಸ್ಥಾನಗಳಲ್ಲಿ ಜಯಗಳಿಸಿದೆ.
ಇಲ್ಲಿ ಮೈತ್ರಿ ಹಿಂದಿಕ್ಕುವಲ್ಲಿ ಮಾತ್ರವೇ ಮೋದಿ ಅಲೆ ಕೆಲಸ ಮಾಡದೇ ಕಾಂಗ್ರೆಸ್ ನೆಲಕಚ್ಚುವಂತೆಯೂ ಮಾಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 73 ಸ್ಥಾನ ಗಳಿಸಿದ್ದು, ಕಾಂಗ್ರೆಸ್ 2 ರಲ್ಲಿ ವಿಜಯಯಿಯಾಗಿತ್ತು.
ಸ್ಥಾನ ಕಳೆದುಕೊಳ್ಳಲಿದ್ದಾರಾ ದಿನೇಶ್ ಗುಂಡೂರಾವ್ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.