ಅದಿತ್ಯನಾಥ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿದ ಯುಪಿ ಸಿಎಂ ಯೋಗಿ

By Suvarna Web DeskFirst Published Oct 5, 2017, 10:04 AM IST
Highlights

ಉತ್ತರ ಪ್ರದೇಶದ್ದ ಕಡಕ್ ಸಿಎಂ ಯೋಗಿ ಅದಿತ್ಯನಾಥ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಕಾರ್ಯಕ್ರಮಗಳಲ್ಲಿ ಯೋಗಿ ಅದಿತ್ಯನಾಥ ಭಾಗವಹಿಸಿದ್ದರು ಯಾವೆಲ್ಲಾ ದೇವಾಲಯಗಳಿಗೆ  ಯೋಗಿ ಅದಿತ್ಯನಾಥ ಭೇಟಿ ನೀಡಿದ್ದು, ಯಾವೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ವಿವರ ಇಲ್ಲಿದೆ ನೋಡಿ

ಮಂಗಳೂರು(ಅ.05): ಕೇರಳದಲ್ಲಿ ನಡೆಯುತ್ತಿರುವ  ಬಿಜೆಪಿ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ  ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ನಿನ್ನೆ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿದ್ರು. ನಿನ್ನೆ ರಾತ್ರಿ 10.30ರ  ಸುಮಾರಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನಾಥ ಪಂಥದ ದಕ್ಷಿಣ ಭಾರತದ ಪ್ರಮುಖ ಕೇಂದ್ರ ಕದ್ರಿ ಜೋಗಿ ಮಠದ ಕದಳಿ ಕಾಳ ಬೈರವ ದರ್ಶನ ಪಡೆದ ಯೋಗಿ,  ಸ್ವತಃ ತಾವೇ ದೇವರಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದ್ದರು. ಮಠದ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ರು. ಸನಾತನ ಹಿಂದೂ ಧರ್ಮ ಉಳಿದರೆ ಎಲ್ಲವೂ ಉಳಿಯುತ್ತೆ. ಆದ್ರೆ ಇಂದು ಅದೇ ಕೇರಳದಲ್ಲಿ ಸನಾತನ ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ ಎಂದರು.

ಯು.ಪಿ ಸಿಎಂ ಯೋಗಿ ಆದಿತ್ಯನಾಥ ಹಾಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಹಲವಾರು ವರ್ಷಗಳ ಸಂಬಂಧವಿದೆ. ಕದ್ರಿ ಜೋಗಿ ಮಠ ನಾಥ ಪಂಥದ ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿದೆ.  ಕದ್ರಿಯಲ್ಲಿರುವ ಯೋಗೇಶ್ವರ ಅಥವಾ ಜೋಗಿ ಮಠವು ನಾಥ ಸಂಪ್ರದಾಯದ ಮಠ. ಇಲ್ಲಿರೋ  ಏಕೈಕ ರಾಜ ಯೋಗಿ ಅವರನ್ನು ಆಯ್ಕೆ ಮಾಡುವುದು ಇದೇ ಯೋಗಿ ಆದಿತ್ಯನಾಥ್ . ಈಗಾಗಲೇ ಈ ಮಠದ ಇಬ್ಬರು ರಾಜಯೋಗಿಗಳನ್ನು ಆದಿತ್ಯನಾಥರೇ ಆಯ್ಕೆ ಮಾಡಿದ್ದರು ಎಂಬುವುದು ವಿಶೇಷ.

ನಿನ್ನೆ ರಾತ್ರಿ ಮಂಗಳೂರಿನ ಜೋಗಿ ಮಠದಲ್ಲೇ ಉಳಿದುಕೊಂಡಿದ್ದ ಯೋಗಿ ಆದಿತ್ಯನಾಥ್, ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಉತ್ತರಪ್ರದೇಶಕ್ಕೆ ವಾಪಸ್ಸಾಗಿದ್ದಾರೆ.

 

click me!