ಯುಎನ್ ನಾಲ್ಕು ಗೋಡೆಗಳ ಮಧ್ಯೆ ಮೋದಿ ನಿರ್ಣಯದ ಗುಸುಗುಸು ಚರ್ಚೆ!

Published : Aug 15, 2019, 09:55 PM IST
ಯುಎನ್ ನಾಲ್ಕು ಗೋಡೆಗಳ ಮಧ್ಯೆ ಮೋದಿ ನಿರ್ಣಯದ ಗುಸುಗುಸು ಚರ್ಚೆ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಹಸ್ಯ ಸಭೆ| ಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಜೋನ್ನಾ ವ್ರೋನೆಕ್ಕಾ ಹೇಳಿಕೆ| ತುರ್ತು ಸಭೆ ಕರೆಯುವಂತೆ ಭದ್ರತಾ ಮಂಡಳಿಗೆ ಆಗ್ರಹಿಸಿದ್ದ ಪಾಕಿಸ್ತಾನ| ಪಾಕ್ ಆಗ್ರಹ ಮನ್ನಿಸುವಂತೆ ಭದ್ರತಾ ಮಂಡಳಿಗೆ ಪತ್ರ ಬರೆದಿದ್ದ ಚೀನಾ| ನಾಳೆ(ಶುಕ್ರವಾರ) ರಹಸ್ಯ ಸಭೆ ನಡೆಸಲಿರುವ ಭದ್ರತಾ ಮಂಡಳಿ|

ವಿಶ್ವಸಂಸ್ಥೆ(ಆ.15): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಸರ್ಕಾರದ ನಿರ್ಣಯ ಹಾಗೂ ಅದರ ಪರಿಣಾಮಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಹಸ್ಯ ಸಭೆ ನಡೆಸಲಿದೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಕುರಿತು ಇದೇ ಶುಕ್ರವಾರ(ಆ.16)ರಂದು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಜೋನ್ನಾ ವ್ರೋನೆಕ್ಕಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಕೊಹ್ಮದ್ ಖುರೇಶಿ ಹೇಳಿದ್ದರು.

ಅದರಂತೆ ಈ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಹಸ್ಯ ಸಭೆ ನಡೆಸಲು ಮುಂದಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವೇಳೇ ಪಾಕಿಸ್ತಾನದ ಮನವಿ ಪುರಸ್ಕರಿಸಿ ಸಭೆ ನಡೆಸುವಂತೆ ಚೀನಾ ಕೂಡ ಆಗ್ರಹಿಸಿತ್ತು. ಅಲ್ಲದೇ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಚೀನಾ ಪತ್ರ ಕೂಡ ಬರೆದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka weather: ರಾಜ್ಯದಲ್ಲಿ ಮುಂಗಾರು ಚುರುಕು: 4 ಜಿಲ್ಲೇಲಿ ಭಾರೀ ಮಳೆ, ಸಿಡಿಲಿಗೆ ರೈತ ಸಾವು!
Jagadish Shettar: ಬೆಳಗಾವಿ, ಕಳಸಾ-ಬಂಡೂರಿ, ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಶೆಟ್ಟರ್ ನೀಡಿದ ಭರವಸೆ ಏನು?