ಪಾರ್ಕ್ ಮಾಡಿದ್ದ ಕಾರು, ಬೈಕ್'ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

Published : Sep 18, 2016, 02:54 AM ISTUpdated : Apr 11, 2018, 12:52 PM IST
ಪಾರ್ಕ್ ಮಾಡಿದ್ದ ಕಾರು, ಬೈಕ್'ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಸಾರಾಂಶ

ಬೆಂಗಳೂರು(ಸೆ.18): ಕಳೆದ ಸೋಮವಾರದ ಹಿಂಸಾಚಾರದಿಂದ ನಿಧಾನವಾಗಿ ಹೊರ ಬರ್ತಿದ್ದ ಬೆಂಗಳೂರಿನ ಜಯನಗರ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಪಾರ್ಕ್ ಮಾಡಿ ಮಲಗಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಶಾಕ್ ಆಗಿದೆ.

ಜಯನಗರದ ಕನಕನಪಾಳ್ಯದಲ್ಲಿ, ರಾತ್ರಿ ಊಟ ಮುಗಿಸಿ ನೆಮ್ಮದಿಯ ನಿದ್ರೆಗೆ ಜಾರುವ ಸಮಯದಲ್ಲೇ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಿಕ್ಕ ಸಿಕ್ಕ ಬೈಕ್'ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ 9 ಬೈಕ್ ಸುಟ್ಟು ಹೋಗಿದೆ. ಹೊಸ ಕಾರೊಂದಕ್ಕೆ ಸಹ ಬೆಂಕಿ ಹಚ್ಚಿದ್ದು ಸ್ಥಳೀಯರ ಎಚ್ಚೆತ್ತುಕೊಂಡಿದ್ದರಿಂದ ಕಾರು ಬೆಂಕಿಗೆ ಆಹುತಿಯಾಗದೇ ಉಳಿದಿದೆ.

ಸದ್ಯ  ಈ ಸಂಬಂಧ  ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್  ಅಧಿಕಾರಿಗಳು ಕೃತ್ಯದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರು, ಈ ಕೃತ್ಯ ಎಸಗಲು ಕಾರಣವೇನು ಎನ್ನುವುದನ್ನು ಪೊಲೀಸರ ಪತ್ತೆ ಹಚ್ಚಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?
ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?