
ನವದೆಹಲಿ (ಅ. 27): ಪ್ರಧಾನಿ ನರೇಂದ್ರ ಮೋದಿ ಅವರು ಮೇಕಪ್ ಕಲಾವಿದರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಮೇಕಪ್‌ಗಾಗಿಯೇ ಪ್ರತಿ ತಿಂಗಳು ಮೋದಿ 15 ಲಕ್ಷರು. ವ್ಯಯ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದಿತ್ಯ ಚತುರ್ವೇದಿ ಎನ್ನುವವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಈ ಪೋಸ್ಟ್ ಅನ್ನು 15 ಸಾವಿರ ಜನರು ಶೇರ್ ಮಾಡಿದ್ದು, 700 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಅವರು ಮೇಕಪ್‌ಗೆ ಖರ್ಚು ಮಾಡುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮಹಿಳೆಯೊಬ್ಬಳು ಮೋದಿ ಅವರಿಗೆ ಮೇಕಪ್ ಮಾಡುವುದನ್ನು ನೋಡಬಹುದಾಗಿದೆ. ಮೋದಿ ಅವರು ಈ ಹಿಂದೆ ಅಮೆರಿಕ ಅಧ್ಯಕ್ಷರ ಭೇಟಿ ವೇಳೆ 10 ಲಕ್ಷದ ಸೂಟು ಧರಿಸಿದ್ದರು ಎಂದು ಸುದ್ದಿಯಾಗಿತ್ತು. ಹೀಗಾಗಿ ಮೋದಿ ಅವರು ಕಾರ್ಯಕ್ರಮದ ವೇಳೆ ವಿವಿಧ ರೀತಿಯ ವೇಷಭೂಷಣ ಧರಿಸಿರುವ ಫೋಟೊಗಳನ್ನು ಹಾಕಿ ಟೀಕಾಕಾರರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ 2016 ರಲ್ಲಿ ತೆಗೆದಿದ್ದಾಗಿದೆ.
ಮೇಡಮ್ ತುಸಾಡ್ಸ್ ಮೇಣದ ಪುತ್ಥಳಿ ನಿರ್ಮಿಸಲು ಬಂದ ತಂಡವೊಂದು ಮೋದಿ ಅವರ ಅಳತೆ ತೆಗೆದುಕೊಂಡಿತ್ತು. ಈ ವೇಳೆ ಮಹಿಳೆಯೊಬ್ಬಳು ಮೋದಿ ಅವರ ಕಣ್ಣಿನ ಅಳತೆ ತೆಗೆದುಕೊಂಡಿದ್ದರು. ಆದರೆ, ಫೋಟೋದ ಹಿನ್ನೆಲೆಯನ್ನು ತಿಳಿಸದೇ ಮೋದಿ ಅವರು ಮೇಕಪ್ ಕಲಾವಿದೆಗೆ ಪ್ರತಿ ತಿಂಗಳು 15 ಲಕ್ಷ ರು. ನೀಡುತ್ತಿದ್ದಾರೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.