ಶಬರಿಮಲೆ: ಮುಗ್ಧರ ಬಂಧಿಸಿದರೆ ಹುಷಾರ್ !

By Web DeskFirst Published Oct 27, 2018, 11:12 AM IST
Highlights

ಕೇರಳದ ಶಬರಿಮಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು 2000 ಜನರನ್ನು ಬೆಂಬಲಿಸಿದ ಬೆನ್ನಲ್ಲೇ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. 

ಕೊಚ್ಚಿ (ಅ. 27): ಕೇರಳದ ಶಬರಿಮಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು 2000 ಜನರನ್ನು ಬೆಂಬಲಿಸಿದ ಬೆನ್ನಲ್ಲೇ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. 

ಮುಗ್ಧರನ್ನು ಬಂಧಿಸಿದರೆ ಬೆಲೆ ತೆರಬೇಕಾದೀತು ಎಂದು ಅದು ಸರ್ಕಾರವನ್ನು ಎಚ್ಚರಿಸಿದೆ. ಗುರುವಾರ ಪೊಲೀಸರು 1400 ಜನರನ್ನು ಬಂಧಿಸಿದ ೪೫೦ ಕೇಸು ಹಾಕಿದ್ದರು. ಇದನ್ನು ಪ್ರಶ್ನಿಸ ಕೆಲವು ಅಯ್ಯಪ್ಪ ಭಕ್ತರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಶುಕ್ರವಾರ ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯ ಪೀಠ, ‘ಸುಮ್ಮನೇ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತೋರಿಕೆಯ ಕ್ರಮ ಬೇಡ. ಬಂಧಿತರಲ್ಲಿ ಮುಗ್ಧರು ಇದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿತು.ಅಲ್ಲದೆ, ಶಬರಿಮಲೆಗೆ ಇತ್ತೀಚಿನ ಮಾಸಿಕ ಪೂಜೆ ವೇಳೆ ಬಂದವರು ನಿಜವಾದ ಭಕ್ತರಾ ಎಂಬುದರ ತನಿಖೆ ನಡೆಸಬೇಕು ಎಂದೂ ಆದೇಶಿಸಿತು.
 

click me!