
ವಾಷಿಂಗ್ಟನ್(ಜು.11): ಗ್ರೀನ್ ಕಾರ್ಡ್ ನೀಡುವಲ್ಲಿ ಪ್ರಸ್ತುತ ಇರುವ ಗರಿಷ್ಟ ಮಿತಿಯನ್ನು ತೆಗೆದು ಹಾಕುವ ಮಹತ್ವದ ಮಸೂದೆಯನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಇದರಿಂದ ಸಾವಿರಕ್ಕೂ ಹೆಚ್ಚು ನುರಿತ ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವಾಗಲಿದೆ.
ಫೈರ್ಮೆಸ್ ಆಫ್ ಹೈ-ಸ್ಕಿಲ್ಡ್ ಇಮಿಗ್ರಾಟ್ಸ್ ಕಾಯ್ದೆ 2019 ಅಥವಾ ಎಚ್‌ಆರ್ 1044 ಮಸೂದೆಯನ್ನು 365-65 ಮತಗಳ ಬಹುಮತದಿಂದ ಸದನ ಅಂಗೀಕರಿಸಿದೆ. ಈ ಮಸೂದೆಯಿಂದಾಗಿ ಗ್ರೀನ್ ಕಾರ್ಡ್ ಹೊಂದಿದ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಾಗೂ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾನೆ.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದ ಈ ಮಸೂದೆ, ಕಾನೂನಾಗಿ ಮಾನ್ಯತೆ ಪಡೆದ ಬಳಿಕ ಅಮೆರಿಕದಲ್ಲಿ ಶಾಶ್ವತ ಕೆಲಸ ಮತ್ತು ವಾಸದ ಪರವಾನಗಿ ಬಯಸುವ ಭಾರತ ಮತ್ತು ಇತರ ದೇಶಗಳ ಪ್ರತಿಭಾವಂತ ವೃತ್ತಿಪರರಿಗೆ ಅನುಕೂಲವಾಗಲಿದೆ.
ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಒಂದು ನಿರ್ದಿಷ್ಟ ವರ್ಷದಲ್ಲಿ ಅಮೆರಿಕ ನೀಡಬೇಕಾದ ಕುಟುಂಬ ಆಧಾರಿತ ವಲಸೆಗಾರರ ವೀಸಾಗಳ ಪೈಕಿ, ಒಂದು ದೇಶದ ಜನರಿಗೆ ಗರಿಷ್ಠ ಶೇ.7ರಷ್ಟು ನೀಡಬಹುದಾಗಿದೆ. ಆದರೆ ಹೊಸ ಮಸೂದೆಯ ಪ್ರಕಾರ ಈ ಮಿತಿಯನ್ನು ಶೇ.15ಕ್ಕೆ ಹೆಚ್ಚಿಸಲು ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.