ಎಸಿಯಿಂದ ತಣ್ಣಗಾಗುವವರಿಗೆ ಬಿಸಿ ಮುಟ್ಟಿಸಿದ ಕೇಂದ್ರ

First Published Jun 23, 2018, 12:40 PM IST
Highlights

ಇನ್ನು ಮುಂದೆ ಎಸಿಯನ್ನು ಹೇಗೇ ಬೇಕೋ ಹಾಗೆ ಬದಲಾವಣೆ ಮಾಡಿಕೊಳ್ಳುವ ಹಾಗೆ ಇಲ್ಲ. ಹೊರಗಡೆ ಬಿಸಿ ಇದೆ ಎಂದು ಎಸಿಯನ್ನು 18 ಡಿಗ್ರಿಗೆ ಇಟ್ಟು ಹಾಯಾಗಿ ಮೀಟಿಂಗ್ ಮಾಡುವಂತೆಯೂ ಇಲ್ಲ! ಏನಿದು ಸುದ್ದಿ ಮುಂದೆ ಓದಿ..

ನವದೆಹಲಿ [ಜೂ.23]  ಇನ್ನು ಮುಂದೆ ಎಸಿಯನ್ನು ಹೇಗೇ ಬೇಕೋ ಹಾಗೆ ಬದಲಾವಣೆ ಮಾಡಿಕೊಳ್ಳುವ ಹಾಗೆ ಇಲ್ಲ. ಹೊರಗಡೆ ಬಿಸಿ ಇದೆ ಎಂದು ಎಸಿಯನ್ನು 18 ಡಿಗ್ರಿಗೆ ಇಟ್ಟು ಹಾಯಾಗಿ ಮೀಟಿಂಗ್ ಮಾಡುವಂತೆಯೂ ಇಲ್ಲ!

ಹೌದು..ಕೇಂದ್ರ ಇಂಧನ ಇಲಾಖೆ ಹವಾನಿಯಂತ್ರಕಗಳ ತಯಾರಿಕ ಕಂಪನಿಗಳಿಗೆ ಸಲಹೆಯೊಂದನ್ನು ನೀಡಿದ್ದು ಡಿಪಾಲ್ಟ್ ಸೆಟ್ಟಿಂಗ್ ಮಾಡಿಕೊಳ್ಳುವಂತೆ ಹೇಳಿದೆ. ಅಂದರೆ ಎಸಿಯನ್ನು 24 ಡಿಗ್ರಿ ಸೆಲ್ಸಿಯಸ್‌ಗೆ ಫಿಕ್ಸ್  ಮಾಡಬೇಕು.

ಸಭೆಯೊಂದರ ನಂತರ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್, ಎಸಿ ತಯಾರಕ ಕಂಪನಿಗಳು 24 ಡಿಗ್ರಿ ಸೆಲ್ಸಿಯಸ್‌ಗೆ  ಡಿಪಾಲ್ಟ್ ಸೆಟ್ಟಿಂಗ್ ಮಾಡಬೇಕು. ಇಂಧನ ಉಳಿತಾಯಕ್ಕೆ ಇದು ಮೊದಲ ಹೆಜ್ಜೆಯಾಗಿದ್ದು ನಂತರ ಕಡ್ಡಾಯ ಮಾಡಲಾಗುವುದು ಎಂದಿದ್ದಾರೆ.

ಒಂದು ಡಿಗ್ರಿ ಟೆಂಪ್ರೆಚರ್ ಏರಿಳಿತದಿಂದ ಶೇ. 6 ರಷ್ಟು ವಿದ್ಯುತ್ ಉಳಿಸಬಹುದು. ಹೊಟೆಲ್ ಗಳು, ಕಚೇರಿಗಳು 18 ರಿಂದ 21 ಡಿಗ್ರಿಗೆ ಎಸಿ ಸೆಟ್ ಮಾಡಿಕೊಂಡಿರುತ್ತವೆ.  24 ರಿಂದ 26 ಡಿಗ್ರಿಗೆ ಇಟ್ಟರೆ ಮನುಷ್ಯನ ದೇಹದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.

click me!