
ಸುಳ್ಳು ಸುದ್ದಿ
ಬೆಂಗಳೂರು : ಯೋಗ ಗುರು ಎಂದೇ ಹೆಸರಾಗಿರುವ ಬಾಬಾ ರಾಮದೇವ್ ಅವರು ದೇವೇಗೌಡರ ಯೋಗ ಸಾಧನೆಗೆ ಮನಸೋತಿದ್ದಾರೆ. ಹೀಗಾಗಿ ತಮ್ಮನ್ನು ಶಿಷ್ಯನಾಗಿ ಸ್ವೀಕರಿಸುವಂತೆ ದೇವೇಗೌಡರನ್ನು ಕೇಳಿಕೊಂಡಿದ್ದಾರೆ. ನಾಳೆಯಿಂದ ಮುಂಜಾನೆ ಯೋಗ ಮಾಡುವಾಗ ನನಗೂ ನಿಮ್ಮ ಯೋಗ ಸಾಧನೆಯನ್ನು ಕಲಿಸಿಕೊಡಿ.
ನಿಮಗೆ ಹೋಲಿಸಿದರೆ ನಾನು ನಾನು ಕಲಿತಿದ್ದು ಏನೇನೂ ಅಲ್ಲ. ಅದರಲ್ಲೂ ನೀವು ಮೊನ್ನೆ ಯೋಗ ಸಾಧನೆಯ ವಿಡಿಯೋ ಶೂಟ್ ಮಾಡಿದ್ದನ್ನು ನೋಡಿದ್ದೇನೆ. ನೀವು ಮಾಡುವ ಆಸನಗಳನ್ನು ನಾನು ಎಷ್ಟು ಪ್ರಯತ್ನಪಟ್ಟರೂ ಮಾಡಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ನಿಮ್ಮ ಬಳಿ ಶಿಷ್ಯತ್ವ ಅರಸಿ ಬಂದಿದ್ದೇನೆ ಎಂದು ರಾಮದೇವ್ ವಿನಂತಿಸಿಕೊಂಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.