ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಯೋಜನೆ

By Suvarna Web DeskFirst Published Apr 6, 2018, 8:03 AM IST
Highlights

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆಕ್ರೋಶದಿಂದ ಎಚ್ಚೆತ್ತಿರುವ ಸರ್ಕಾರ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಹುಡುಕಲು ಆರಂಭಿಸಿದೆ.

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆಕ್ರೋಶದಿಂದ ಎಚ್ಚೆತ್ತಿರುವ ಸರ್ಕಾರ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಹುಡುಕಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯಗಳು ಜಂಟಿಯಾಗಿ ಇಂಥದ್ದೊಂದು ಕೆಲಸಕ್ಕೆ ಕೈಹಾಕಿವೆ.

ಮೂಲಗಳ ಪ್ರಕಾರ, ಈಗಿನ ದರಕ್ಕಿಂತ ಕಡಿಮೆ ದರಕ್ಕೆ ತೈಲ ಪೂರೈಕೆ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ. ಆದರೆ ಈಗಿನ ದರಕ್ಕಿಂತ ಇನ್ನೂ ಹೆಚ್ಚಿನ ದರ ಗ್ರಾಹಕರಿಗೆ ವರ್ಗಾವಣೆ ಆಗದೇ ಇರಲು ಏನು ಮಾಡಬಹುದು ಎಂಬುದರ ಬಗ್ಗೆ ಅವು ಪರಿಶೀಲನೆ ನಡೆಸುತ್ತಿವೆ.

ಹಣಕಾಸು ಸಚಿವಾಲಯವು ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಹೊರೆ ಕಡಿಮೆ ಮಾಡಬಹುದು ಎಂಬುದು ಪೆಟ್ರೋಲಿಯಂ ಸಚಿವಾಲಯದ ವಾದ. ಆದರೆ ವಿತರಕರ ಕಮೀಷನ್‌ ಕಡಿತ ಮಾಡುವ ಮೂಲಕ ಗ್ರಾಹಕರಿಗೆ ನೆರವಾಗಿ ಎಂಬುದು ಹಣಕಾಸು ಸಚಿವಾಲಯದ ಸಲಹೆ. ಹೀಗಾಗಿ ಎರಡೂ ಪ್ರಸ್ತಾವದ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

click me!