ಸದನಕ್ಕೆ ಗೈರಾದ ಅಸಮಾಧಾನಿತ ಶಾಸಕರ ಪಟ್ಟಿ...

Published : Dec 10, 2018, 11:08 PM ISTUpdated : Dec 10, 2018, 11:13 PM IST
ಸದನಕ್ಕೆ ಗೈರಾದ ಅಸಮಾಧಾನಿತ ಶಾಸಕರ ಪಟ್ಟಿ...

ಸಾರಾಂಶ

ನಿರೀಕ್ಷೆಯಂತೆ ಬೆಳಗಾವಿ ಅಧಿವೇಶನದಿಂದ ಅಸಮಾಧಾನಿತ ಶಾಸಕರು ದೂರ ಉಳಿದಿದ್ದಾರೆ. ಬೆಳಗಾವಿ ಅಧಿವೇಶನದ ಮೊದಲ ದಿನವೇ ಹಲವು ಕಾಂಗ್ರೆಸ್ ಶಾಸಕರ ಗೈರಾಗಿದ್ದಾರೆ. ಹಾಗಾದರೆ ಚಕ್ಕರ್ ಹಾಕಿದವರು ಯಾರ್ಯಾರು?

ಬೆಳಗಾವಿ[ಡಿ.10]  ಸಂಪುಟ ವಿಸ್ತರಣೆಗೆ ದೋಸ್ತಿ ಸರಕಾರ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದರೆ ಅಸಮಾಧಾನಿತ ಶಾಸಕರು ಸದನಕ್ಕೆ ಚಕ್ಕರ್ ಹಾಕಿದ್ದಾರೆ.

ಕಂಪ್ಲಿ ಶಾಸಕ ಗಣೇಶ್, ಸಂಡೂರು ಶಾಸಕ ತುಕಾರಾಮ್, ವಿಜಯನಗರ ಶಾಸಕ ಆನಂದ ಸಿಂಗ್, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಪಕ್ಷೇತರ ಶಾಸಕ ನಾಗೇಶ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್, ಶಾಸಕ ಎಂ.ಬಿ ಪಾಟೀಲ್ ಸೇರಿದಂತೆ ಹಲವು ಅಸಮಾಧಾನಿತ ಶಾಸಕರು ಸದನಕ್ಕೆ ಬಂದಿಲ್ಲ.

ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಗೈರಾಗಿರುವುದು ಪರೋಕ್ಷವಾಗಿ ದೋಸ್ತಿ ಸರಕಾರದ ಪ್ರಮುಖ ನಾಯಕರಿಗೆ ಕಾಡಿದೆ. ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದು ಅಲ್ಲಿಂದಲೇ ಯಾವುದಾದರೂ ರಾಜಕೀಯ ದಾಳ ಉರುಳಿಸುತ್ತಾರೋ ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್
ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?