ವಿದೇಶಕ್ಕೆ ಹಾರಿದ ಸಿದ್ದರಾಮಯ್ಯ, ಬಳ್ಳಾರಿ ಶಾಸಕರ ಪತ್ತೆ ಇಲ್ಲಯ್ಯ!

By Web Desk  |  First Published Dec 10, 2018, 8:11 PM IST

ಒಂದು ಕಡೆ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿದ್ದರೆ ಇನ್ನೊಂದು ಕಡೆ ವಿವಿಧ ಪಕ್ಷಗಳ ನಾಯಕರು ಭೇಟಿ ಮಾಡುತ್ತಿರುವುದು ರಾಜಕಾರಣದಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಇದೆಲ್ಲದಕ್ಕೆ ಸೋಮವಾರದ ಬೆಳವಣಿಗೆಯೇ ಸಾಕ್ಷಿ


ಬೆಳಗಾವಿ[ಡಿ.10]  ಸೋಮವಾರದಿಂದ ಆರಂಭವಾಗಿರುವ ಬೆಳಗಾವಿ ಅಧಿವೇಶನ ಹಲವು ಕುತೂಹಲ ಮತ್ತು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಬಳ್ಳಾರಿ ಶಾಸಕರ ಗೈರು ಹಾಜರಿ ಅನುಮಾನಕ್ಕೆ ಮೂಲ ಕಾರಣ. ಸಿದ್ದು ಬಣದ ಬಹುತೇಕ ಶಾಸಕರ ಗೈರು ಹಾಜರಿ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನು ಸಾರಿ ಹೇಳಿದರೆ  ಶ್ರೀರಾಮುಲು ಮತ್ತು ಸತೀಶ್ ಜಾರಕೊಹೊಳಿ ರಹಸ್ಯ ಭೇಟಿ ಮತ್ತೊಂದು ಚರ್ಚೆಗೂ ನಾಂದಿ ಹಾಡಿದೆ.

ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರವನ್ನ ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗದೆ ವಿದೇಶಕ್ಕೆ ತೆರಳಲಿದ್ದಾರೆ.. ಐದು ದಿನಗಳ ವಿದೇಶ ಪ್ರವಾಸ ಮೈತ್ರಿ ಸರ್ಕಾರಕ್ಕೆ ಆತಂಕತಂದೊಡಿದೆ. ಶಾಸಕರನ್ನ ಕಂಟ್ರೋಲ್ ಮಾಡಬೇಕಿದ್ದ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್ ಶಾಸಕರು ಸದನದಿಂದ ದೂರು ಉಳಿಯಲು ಅವಕಾಶ ನೀಡದಂತಾಗಿದೆ. ಇದು ಸಮ್ಮಿಶ್ರ ಸರ್ಕಾರಕ್ಕೆ ಸದನದಲ್ಲಿ‌ ದೊಡ್ಡ ಏಟು ನೀಡಿದರೆ ಅಚ್ಚರಿ ಇಲ್ಲ.

Tap to resize

Latest Videos

ರೆಸಾರ್ಟ್ ವೀಕ್ಷಣೆ ನಂತರ ಸತೀಶ್‌ ಜಾರಕಿಹೊಳಿ-ರಾಮುಲು ರಹಸ್ಯ ಭೇಟಿ

ದಿನೇಶ್ ಗುಂಡೂರಾವ್ ,ಉಪಮುಖ್ಯಮಂತ್ರಿ ಪರಮೇಶ್ವರ್ ಸದನದಲ್ಲಿ ಇಲ್ಲದಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ..ಈ ಮಧ್ಯೆ ಸಿದ್ದರಾಮಯ್ಯ ಬೆಂಬಲಿಗರಾಗಿರುವ ಬಳ್ಳಾರಿ ಶಾಸಕರು ಸದನದ ಕಡೆ ಮುಖ ಹಾಕಿಲ್ಲ.  ಈ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಬಂಡಾಯದ ಮುನ್ಸೂಚನೆಯಾ? ಅನ್ನೋ ಚರ್ಚೆಗೆ  ಕಾರಣವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕ ಶ್ರೀರಾಮುಲು ಮತ್ತು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ರಹಸ್ಯ ಚರ್ಚೆ ಸಹ ನಡೆಸಿದ್ದಾರೆ.

ಇನ್ನೊಂದು ಕಡೆ ಹೊಸಪೇಟೆ ಶಾಸಕ ಅನಂದ್ ಸಿಂಗ್  ಮಾತೃಪಕ್ಷ ಬಿಜೆಪಿಗೆ ಮರಳುತ್ತಾರಾ ಅನ್ನೋ‌ ಗುಸು ಗುಸು ಜೋರಾಗಿದೆ. ಆನಂದ್ ಸಿಂಗ್ ಅಧಿವೇಶನಕ್ಕೆ ಹಾಜರಾಗದೆ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಹಲವು ಅನುಮಾನಗಳಿಗೆ ಅಧಿವೇಶನ ಉತ್ತರ ನೀಡಲಿದೆಯಾ ಎಂಬ ಪ್ರಶ್ನೆ ಸಹ ಮನೆ ಮಾಡಿದೆ. 

click me!