ಚೋಟಾ ರಾಜನ್ ಆರೋಪಿ ಎಂದು ಘೋಷಿಸಿದ ಸಿಬಿಐ ಕೋರ್ಟ್

By Suvarna Web DeskFirst Published Apr 24, 2017, 11:46 AM IST
Highlights

ಚೋಟಾ ರಾಜನ್ ಒಳಗೊಂಡು ಮೂವರು ಪಾಸ್'ಪೋರ್ಟ್ ಅಧಿಕಾರಿಗಳು ಸಹ ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ವೀರೇಂದ್ರ ಕುಮಾರ್ ಗೋಯಲ್ ತೀರ್ಪು ನೀಡಿದ್ದಾರೆ.

ನವದೆಹಲಿ(ಏ.24): ನಕಲಿ ಪಾಸ್'ಪೂರ್ಟ್ ಪ್ರಕರಣದಲ್ಲಿ ಭೂಗತ ದೊರೆ ಚೋಟಾ ರಾಜನ್ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಚೋಟಾ ರಾಜನ್ ಒಳಗೊಂಡು ಮೂವರು ಪಾಸ್'ಪೋರ್ಟ್ ಅಧಿಕಾರಿಗಳು ಸಹ ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ವೀರೇಂದ್ರ ಕುಮಾರ್ ಗೋಯಲ್ ತೀರ್ಪು ನೀಡಿದ್ದಾರೆ.

ಚೋಟಾ ರಾಜನ್ ಬೆಂಗಳೂರಿನ ವಿಳಾಸದಲ್ಲಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ 1998-99 ರಲ್ಲಿ ನಕಲಿ ಪಾಸ್'ಪೋರ್ಟ್ ಪಡೆದುಕೊಂಡಿದ್ದ. ಕೊಲೆ,ಕಳವು, ಮಾದಕವಸ್ತು ಕಳ್ಳಸಾಗಾಣಿಕೆ ಸೇರಿದಂತೆ ದೇಶಾದಾದ್ಯಂತ ಸುಮಾರು 85 ಪ್ರಕರಣಗಳು ರಾಜನ್  ಮೇಲಿವೆ.

ಹಲವು ವರ್ಷಗಳಿಂದ ಇಂಡೋನೇಷಿಯ'ದಲ್ಲಿ ನೆಲಸಿದ್ದ ಈತನನ್ನು ಅಲ್ಲಿನ ಸರ್ಕಾರ ನವೆಂಬರ್ 6, 2015 ರಂದು ಭಾರತಕ್ಕೆ ಹಸ್ತಾಂತರಿತ್ತು.

click me!