ಕರ್ನಾಟಕ ಸೇರಿ ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಏರಿಕೆ

By Suvarna Web DeskFirst Published Jan 9, 2018, 10:42 PM IST
Highlights

೨೦೦೦ರ ಇಸವಿಗೆ ಹೋಲಿಸಿದರೆ, ೧೬ ವರ್ಷಗಳಲ್ಲಿ ೧ ಲಕ್ಷ ಕೈದಿಗಳ ಸಂಖ್ಯೆ ಏರಿಕೆಯಾಗಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಮುಂತಾದ ಐದು ರಾಜ್ಯಗಳಲ್ಲಿ ಅತ್ಯಧಿಕ ಶೇ. ೫೩ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ.

ನವದೆಹಲಿ(ಜ.09): ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕರ್ನಾಟಕದಲ್ಲೂ ಈ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ. ೨೦೧೫ರಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ೨.೮೨ ಲಕ್ಷ ಇದ್ದಿದ್ದುದು, ೨೦೧೬ರಲ್ಲಿ ೨.೯೩ ಲಕ್ಷಕ್ಕೆ ಏರಿಕೆಯಾಗಿದೆ ಎಂದು ಗೃಹ ಸಚಿವಾಲಯ ಸಂಸತ್ತಿನಲ್ಲಿ ಬಿಡುಗಡೆಗೊಳಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ೨೦೦೦ರ ಇಸವಿಗೆ ಹೋಲಿಸಿದರೆ, ೧೬ ವರ್ಷಗಳಲ್ಲಿ ೧ ಲಕ್ಷ ಕೈದಿಗಳ ಸಂಖ್ಯೆ ಏರಿಕೆಯಾಗಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಮುಂತಾದ ಐದು ರಾಜ್ಯಗಳಲ್ಲಿ ಅತ್ಯಧಿಕ ಶೇ. ೫೩ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಉತ್ತರ ಪ್ರದೇಶ ದೇಶದಲ್ಲೇ ಅಧಿಕ ಪಾಲನ್ನು ಹೊಂದಿದ್ದು, ಅಲ್ಲಿ ೬೮,೪೩೨ ವಿಚಾರಣಾಧೀನ ಕೈದಿಗಳಿದ್ದಾರೆ. ಕರ್ನಾಟಕದಲ್ಲಿ ೧೦,೫೦೪ ಅಂತಹ ಕೈದಿಗಳಿದ್ದು, ೨೦೧೫ರಲ್ಲಿ ೯,೩೧೪ ಮಂದಿಯಿದ್ದರು.

click me!