ಚಂದ್ರಯಾನದ ಆಸೆ ಕೈಬಿಟ್ಟ ‘ಟೀಮ್ ಇಂಡಸ್’

Published : Jan 09, 2018, 10:35 PM ISTUpdated : Apr 11, 2018, 12:46 PM IST
ಚಂದ್ರಯಾನದ ಆಸೆ ಕೈಬಿಟ್ಟ ‘ಟೀಮ್ ಇಂಡಸ್’

ಸಾರಾಂಶ

ಸ್ಪರ್ಧೆಗೆ ಬೇಕಾದ ಹಣ ಹೊಂದಿಸಲು ವಿಫಲವಾದ ಕಾರಣ ಟೀಮ್ ಇಂಡಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ ಎಂದು ಮೂಲಗಳು ಹೇಳಿವೆ

ನವದೆಹಲಿ(ಜ.09): ಕಳೆದ ವರ್ಷ ಡಿ.31ರಂದು ಚಂದ್ರಗ್ರಹ ತಲುಪುವ ಗುರಿ ಹೊಂದಿದ್ದ ‘ಟೀಮ್ ಇಂಡಸ್’ ಎಂಬ ಖಾಸಗಿ ಬಾಹ್ಯಾಕಾಶ ಕಂಪನಿ ತನ್ನ ಯೋಜನೆಯನ್ನು ಕೈಬಿಟ್ಟಿದೆ. ಗೂಗಲ್ ಕಂಪನಿಯು ಚಂದ್ರಯಾನ ಸಂಬಂಧ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ವಿಶ್ವದ 5 ತಂಡಗಳು ಪಾಲ್ಗೊಳ್ಳಬೇಕಿತ್ತು. 35ದಶಲಕ್ಷ ಡಾಲರ್ ಬಹುಮಾನ ಹಣ ಕೂಡ ಘೋಷಿಸಲಾಗಿದೆ. ಆದರೆ ಭಾರತದ ‘ಟೀಮ್ ಇಂಡಸ್’ ಈಗ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಸ್ಪರ್ಧೆಗೆ ಬೇಕಾದ ಹಣ ಹೊಂದಿಸಲು ವಿಫಲವಾದ ಕಾರಣ ಟೀಮ್ ಇಂಡಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ ಎಂದು ಮೂಲಗಳು ಹೇಳಿವೆ. ಚಂದ್ರನ ಮೇಲಿಟ್ಟ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಟೀಮ್ ಇಂಡಸ್ ಇಚ್ಛಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಭಾರೀ ಗುಡ್‌ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ
ಕೆಪಿಎಸ್‌ಸಿ ಅಕ್ರಮದ ಎಸ್‌ಐಟಿಗೆ ಹೈಕೋರ್ಟ್‌ನಿಂದ ನೇಮಕಗೊಂಡ ಎರಡೇ ದಿನಕ್ಕೆ ಬಿಗ್ ಟ್ವಿಸ್ಟ್: IPS ಅಧಿಕಾರಿ ಕುಶಾಲ್ ಚೌಕ್ಸೆ ದಿಢೀರ್ ವರ್ಗಾವಣೆ!