ಜಯಾಗೆ ನೊಬೆಲ್ ನೀಡಲು ಒತ್ತಾಯ

By Suvarna Web deskFirst Published Jan 9, 2018, 10:29 PM IST
Highlights

ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜಯಲಲಿತಾ 1992ರಲ್ಲಿ ತೊಟ್ಟಿಲು ಯೋಜನೆಯನ್ನು ತಾಯಿ-ಮಗುವಿಗೋಸ್ಕರ ಆರಂಭಿಸಿದರು.

ಚೆನ್ನೈ(ಜ.09): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಎಐಎಡಿಎಂಕೆ ಹಿರಿಯ ನಾಯಕ ಹಾಗೂ ತಮಿಳುನಾಡು ವಿಧಾನಸಭೆ ಉಪಾಧ್ಯಕ್ಷ ವಿ. ಜಯರಾಮನ್ ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜಯಲಲಿತಾ 1992ರಲ್ಲಿ ತೊಟ್ಟಿಲು ಯೋಜನೆಯನ್ನು ತಾಯಿ-ಮಗುವಿಗೋಸ್ಕರ ಆರಂಭಿಸಿದರು.

ಈ ಯೋಜನೆಯನ್ನು ನೊಬೆಲ್ ವಿಜೇತೆ ಮದರ್ ತೆರೇಸಾ ಅವರೂ ಪ್ರಶಂಸಿಸಿದ್ದರು. ಇದರಿಂದ ಲಿಂಗ ಅಸಮಾನತೆ ಪ್ರಮಾಣ ಕುಸಿಯಿತು. ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಬಂದಿತು. ಹೀಗಾಗಿ ಜಯಾಗೆ ನೊಬೆಲ್ ಕೊಡಬೇಕು’ ಎಂದು ಆಗ್ರಹಿಸಿದರು.

click me!