
ವ್ಹೀಲ್ ಚೇರ್‌ಗಾಗಿ ರೋಗಿಯ ಕುಟುಂಬದವರು ಹಣ ನೀಡದ ಕಾರಣಕ್ಕಾಗಿ ಆತನ ಮಗುವಿನ ತ್ರಿಚಕ್ರ ಸೈಕಲನ್ನು ಬಳಸುವಂತೆ ಮಾಡಿದ ಆಘಾತಕಾರಿ ಘಟನೆ ಹೈದ್ರಾಬಾದ್ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
33 ವರ್ಷದ ರಾಜು ಎಂಬಾತ ಅಪಘಾತವೊಂದರಲ್ಲಿ ತಲೆಗೆ ಗಾಯಗೊಂಡು ಹೈದ್ರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರಾಜು ಪತ್ನಿ ಈ ಮೊದಲು 100ರಿಂದ 200 ರೂಪಾಯಿ ನೀಡಿ ತಮ್ಮ ಗಂಡನನ್ನು ವ್ಹೀಲ್ ಚೇರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆದರೆ ನಿನ್ನೆ ಅವರಿಗೆ ನೀಡುವಷ್ಟು ಹಣ ತಮ್ಮ ಬಳಿ ಇರಲಿಲ್ಲ. ಹೀಗಾಗಿ ತಮ್ಮ ಮಗುವಿನ ತ್ರಿಚಕ್ರ ಸೈಕಲನ್ನು ಬಳಸಿದ್ದಾರೆ. ಗಾಯಾಳುವಿನ ಪತ್ನಿ ಹೇಳುವ ಪ್ರಕಾರ ನಾವು ಐದಾರು ಬಾರಿ ವ್ಹೀಲ್ ಚೇರ್‌ಗಾಗಿ ತಲಾ 100 ರೂ. ಪಾವತಿಸಿದ್ದೇವೆ. ಹಣ ಹೊಂದಿಸುವವರೆಗೆ ನಮ್ಮ ಮೊಬೈಲ್ ಫೋನ್ ಗಳನ್ನು ಅವರ ಬಳಿ ಇಡುವಂತೆ ಹೇಳಿದ್ದರು ಎಂದು ಇಲ್ಲಿನ ಕರಾಳಮುಖವನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಪತ್ರೆ ವೈದ್ಯಾಧಿಕಾರಿ ಘಟನೆಗೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ಲಿಖಿತ ದೂರು ಬಂದಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.