ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಸ್ವಸ್ಥ- 21 ಕಾರ್ಯಕರ್ತರು ಸಾವು!

By Suvarna NewsFirst Published Aug 1, 2018, 5:02 PM IST
Highlights

ತಮಿಳುನಾಡು ಮಾಜಿ ಮುಖ್ಯಂತ್ರಿ ಕರುಣಾನಿಧಿ ಆನಾರೋಗ್ಯ ಕಾರ್ಯಕರ್ತರಿಗೆ ಶಾಕ್ ನೀಡಿದೆ. ಡಿಎಂಕೆ ನಾಯಕ ಆಸ್ಪತ್ರೆ ದಾಖಲಾಗುತ್ತಿದ್ದಂತೆ, ಇತ್ತ ಕಾರ್ಯಕರ್ತರು ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಚೆನ್ನೈ(ಆ.01): ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಕರುಣಾನಿಧಿ ಆರೋಗ್ಯ ಯಥಾ ಮುಂದುವರಿದಿದೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಕಾರ್ಯಕರ್ತರು ದಿಗ್ಬ್ರಾಂತರಾಗಿದ್ದಾರೆ.

ಕರುಣಾನಿಧಿ ಆಸ್ಪತ್ರೆ ದಾಖಲಾಗುತ್ತಿದ ಸುದ್ದಿ ಕೇಳಿ ನೋವನ್ನ ತಾಳಲಾರದ ಕಾರ್ಯಕರ್ತರು ಸಾವಿಗೆ ಶರಣಾಗುತ್ತಿದ್ದಾರೆ.  ಈ ವರೆಗೆ 21 ಡಿಎಂಕೆ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ. ಕರುಣಾನಿಧಿ ಆರೋಗ್ಯ ಚೇತರಿಕೆ ಕಂಡಿದೆ. ಯಾವೊಬ್ಬ ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಬಾರದು ಎಂದು ಕರುಣಾನಿಧಿ ಪುತ್ರ, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಮನವಿ ಮಾಡಿದ್ದಾರೆ.

ಪಕ್ಷ ಯಾವ ಕಾರ್ಯಕರ್ತರನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಾರ್ಯಕರ್ತರು ತಾಳ್ಮೆ ವಹಿಸಬೇಕು ಎಂದು ಸ್ಟಾಲಿನ್, ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.  ಕರುಣಾನಿಧಿ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು, ತಮಿಳು ನಟ-ನಟಿಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಜುಲೈ 28 ರಂದು ಕರುಣಾನಿಧಿ ರಕ್ತದ ಒತ್ತಡ ಸಮಸ್ಸೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 4 ದಿನಗಳ ನಿರಂತರ ಚಿಕಿತ್ಸೆಯಿಂದ ಆರೋಗ್ಯ ಅಲ್ಪ ಚೇತರಿಕೆ ಕಂಡಿದೆ. 
 

click me!